ʼತಾರಕ್ ಮೆಹ್ತಾʼ ಖ್ಯಾತಿಯ ನಟ ಗುರುಚರಣ್ ಸಿಂಗ್ ನಾಪತ್ತೆ; ಅಪಹರಣ ದೂರು ದಾಖಲಿಸಿದ ತಂದೆ
ಗುರುಚರಣ್ ಸಿಂಗ್ | PC : NDTV
ಹೊಸದಿಲ್ಲಿ: “ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ” ಖ್ಯಾತಿಯ ನಟ ಗುರುಚರಣ್ ಸಿಂಗ್ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಧಾರಾವಾಹಿಯಲ್ಲಿ ಸಿಂಗ್ ನಿರ್ವಹಿಸಿದ್ದ ರೋಶನ್ ಸಿಂಗ್ ಸೋಧಿ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದಿತ್ತು.
ಸಿಂಗ್ ಅವರ ತಂದೆ ನೀಡಿದ ದೂರಿನ ಆಧಾರದಲ್ಲಿ ದಿಲ್ಲಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಪುತ್ರ ದಿಲ್ಲಿಯಿಂದ ಮುಂಬೈಗೆ ಸೋಮವಾರ ಪ್ರಯಾಣ ಬೆಳೆಸಿದ್ದರೂ ಮುಂಬೈ ತಲುಪಿಲ್ಲ, ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದಿದ್ದರು.
ಸೋಮವಾರ ರಾತ್ರಿ ಪಾಲಮ್ ಪ್ರದೇಶದಲ್ಲಿದ್ದ ಸೀಸಿಟಿವಿಯಲ್ಲಿ 50 ವರ್ಷದ ಸಿಂಗ್ ಅವರು ರಸ್ತೆ ದಾಟುತ್ತಿರುವ ದೃಶ್ಯ ಸೆರೆಯಾಗಿದೆ.
ಅವರ ವಿಮಾನ ಸೋಮವಾರ ರಾತ್ರಿ 8.30ಕ್ಕೆ ಹೊರಡಲಿತ್ತು, ಆದರೆ ಅವರು ಪಾಲಮ್ನಲ್ಲಿ ರಾತ್ರಿ 9.14ಕ್ಕೆ ಕಾಣಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನಿಖೆ ಮುಂದುವರಿದಿದೆ.
Next Story