ಜಿಂಬಾಬ್ವೆ: 37 ವರ್ಷಗಳ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಮುಗಾಬೆ ರಾಜೀನಾಮೆ
ಜಿಂಬಾಬ್ವೆ, ನ.21: 37 ವರ್ಷಗಳ ಕಾಲ ಜಿಂಬಾಬ್ವೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಬರ್ಟ್ ಮುಗಾಬೆ ತಕ್ಷಣಕ್ಕೆ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ದೇಶದ ಪಾರ್ಲಿಮೆಂಟ್ ನ ಸ್ಪೀಕರ್ ಹೇಳಿದ್ದಾರೆ.
“ಅಧಿಕಾರದಿಂದ ಕೆಳಗಿಳಿಯಿರಿ, ಇಲ್ಲವೇ ವಾಗ್ದಂಡನೆ ಎದುರಿಸಿ” ಎಂದು ಇತ್ತೀಚೆಗೆ ಆಡಳಿತಾರೂಢ ಪಕ್ಷ ಮುಗಾಬೆಗೆ ಎಚ್ಚರಿಕೆ ನೀಡಿತ್ತು. ಆದರೆ ಈ ಎಚ್ಚರಿಕೆಯನ್ನು ಮುಗಾಬೆ ಧಿಕ್ಕರಿಸಿದ್ದರು. ಇತ್ತೀಚೆಗಷ್ಟೇ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಮುಗಾಬೆ ರಾಜೀನಾಮೆ ನೀಡುವ ಬಗ್ಗೆ ಏನನ್ನೂ ಹೇಳಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಮುಗಾಬೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದರು.
Next Story