ನೂತನ-ಕೊರೋನವೈರಸ್ ಸಹಜ ಪ್ರಕ್ರಿಯೆಗಳಿಂದಲೇ ಸೃಷ್ಟಿಯಾಗಿದೆ: ವಿಜ್ಞಾನಿಗಳ ಅಧ್ಯಯನ
ನ್ಯೂಯಾರ್ಕ್, ಮಾ. 19: ನೂತನ-ಕೊರೋನವೈರಸನ್ನು ಉದ್ದೇಶಪೂರ್ವಕವಾಗಿ ಜನೆಟಿಕ್-ಇಂಜಿನಿಯರಿಂಗ್ ಮೂಲಕ ಸೃಷ್ಟಿಸಲಾಗಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಸ್ಕ್ರಿಪ್ಸ್ ರಿಸರ್ಚ್ ಇನ್‌ಟ್ಟಿಟ್ಯೂಟ್‌ನ ವಿಜ್ಞಾನಿಗಳು, ಕೋವಿಡ್-19 ಸಾಂಕ್ರಾಮಿಕವು ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿರುವುದಲ್ಲ, ಅವುಗಳು ಸಹಜ ಮೂಲವನ್ನು ಹೊಂದಿವೆ ಎಂದು ಹೇಳಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷ ಸೃಷ್ಟಿಯಾಗಿರುವ ಕೋವಿಡ್-19, ಸಹಜ ವಿಕಾಸದ ಉತ್ಪನ್ನವಾಗಿದೆ ಎಂದು ‘ನೇಚರ್ ಮೆಡಿಸಿನ್’ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
‘‘ನಮಗೆ ಗೊತ್ತಿರುವ ಕೊರೋನವೈರಸ್ ಮಾದರಿಗಳ ಲಭ್ಯ ವಂಶವಾಹಿ ಅನುಕ್ರಮಣಿಕೆಗಳನ್ನು ತುಲನೆ ಮಾಡುವ ಮೂಲಕ, ಕೋವಿಡ್-19 ಸಹಜ ಪ್ರಕ್ರಿಯೆಗಳ ಮೂಲಕವೇ ಸೃಷ್ಟಿಯಾಗಿದೆ ಎಂಬ ದೃಢ ನಿರ್ಧಾರಕ್ಕೆ ನಾವು ಬರಬಹುದಾಗಿದೆ’’ ಎಂದು ಸ್ಕ್ರಿಪ್ಸ್ ರಿಸರ್ಚ್‌ನಲ್ಲಿ ಇಮ್ಯೂನಾಲಜಿ ಮತ್ತು ಮೈಕ್ರೋಬಯಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಕ್ರಿಸ್ಟಿಯನ್ ಆ್ಯಂಡರ್‌ಸನ್ ಹೇಳುತ್ತಾರೆ.
Next Story