ಟ್ರಂಪ್ ಮಾನಸಿಕ ಸ್ಥಿರತೆ ಬಗ್ಗೆ ‘ಗಂಭೀರ ಕಳವಳ’ : 3 ಮಾನಸಿಕ ತಜ್ಞರಿಂದ ಒಬಾಮಗೆ ಪತ್ರ
ವಾಶಿಂಗ್ಟನ್, ಡಿ. 19: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾನಸಿಕ ಸ್ಥಿರತೆ ಬಗ್ಗೆ ‘ಗಂಭೀರ ಕಳವಳ’ ವ್ಯಕ್ತಪಡಿಸಿ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಮೂವರು ಖ್ಯಾತ ಮನಶ್ಶಾಸ್ತ್ರ ಪ್ರಾಧ್ಯಾಪಕರು ಅಧ್ಯಕ್ಷ ಬರಾಕ್ ಒಬಾಮರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಆದಾಗ್ಯೂ, ಅಧ್ಯಕ್ಷ ಹುದ್ದೆಗೆ ಟ್ರಂಪ್ ಸರಿ ಹೊಂದುತ್ತಾರೆಯೇ ಎಂಬ ಬಗ್ಗೆ ಮಾನಸಿಕ ಆರೋಗ್ಯ ಪರಿಣತರು ಆತಂಕ ವ್ಯಕ್ತಪಡಿಸಿರುವುದು ಇದು ಮೊದಲ ಬಾರಿಯೇನೂ ಅಲ್ಲ.
ನಿಯೋಜಿತ ಅಧ್ಯಕ್ಷರು ಜನವರಿ 20ರಂದು ಅಧಿಕಾರ ಸ್ವೀಕರಿಸುವ ಮೊದಲು ಅವರ ‘ಪೂರ್ಣ ವೈದ್ಯಕೀಯ ಮತ್ತು ನರಮಾನಸಿಕ ತಪಾಸಣೆ’ ನಡೆಸಲು ಆದೇಶ ನೀಡುವಂತೆ ಅಮೆರಿಕದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ವೈದ್ಯರು ಒತ್ತಾಯಿಸಿದ್ದಾರೆ.
ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಓರ್ವ ವೈದ್ಯ ಹಾಗೂ ಅಮೆರಿಕದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಇಬ್ಬರು ವೈದ್ಯರು ಸೇರಿದಂತೆ ಮೂವರು ವೈದ್ಯರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಪತ್ರವನ್ನು ಖ್ಯಾತ ಮನಶ್ಶಾಸ್ತ್ರ ತಜ್ಞರು ಬರೆದಿರುವ ಹಿನ್ನೆಲೆಯಲ್ಲಿ ಅದಕ್ಕೆ ಮಹತ್ವ ಪ್ರಾಪ್ತವಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.