ನೇಪಾಳದಲ್ಲಿ 5.2 ತೀವ್ರತೆಯ ಭೂಕಂಪ, ಸಾವು ನೋವು ಇಲ್ಲ , ಬಿಹಾರದಲ್ಲೂ ಕಂಪನದ ಅನುಭವ
ಹೊಸದಿಲ್ಲಿ , ಫೆ 5 : ಶುಕ್ರವಾರ ತಡರಾತ್ರಿ ಸುಮಾರು 10 ಗಂಟೆಯ ಬಳಿಕ ನೇಪಾಳದಲ್ಲಿ 5.2 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದೆ. ಯು ಎಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ ಕಟ್ಮಂಡುವಿನಲ್ಲಿ ಭಾರೀ ಕಂಪನದ ಅನುಭವವಾಗಿದೆ. ರಾಜಧಾನಿಯಲ್ಲಿ ಭಯಭೀತ ನಿವಾಸಿಗಳು ಮನೆಗಳಿಂದ ಹೊರಗೆ ಓಡುತ್ತಿದ್ದರು. ಕಂಪನದ ಕೇಂದ್ರ ಕತ್ಮನ್ದುವಿನಿಂದ 16 ಕಿ ಮಿ ದೂರದಲ್ಲಿತ್ತು ಎಂದು ಹೇಳಲಾಗಿದೆ. ಈವರೆಗೆ ಯಾವುದೇ ಸಾವು ನೋವಿನ ವರದಿ ಬಂದಿಲ್ಲ.
ನೇಪಾಳ ಭೂಕಂಪದ ಪರಿಣಾಮ ಬಿಹಾರದ ಕೆಲವು ಕಡೆ ಆಗಿದ್ದು ಕಂಪನದ ಅನುಭವವಾಗಿದೆ.
ಕಳೆದ ವರ್ಷದ ಭಾರೀ ಭೂಕಂಪಕ್ಕೆ ನೇಪಾಳದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದರು.
Next Story