ಅಮೇರಿಕ ವೀಸಾಗೆ ಇನ್ನು ನಿಮ್ಮ ಫೇಸ್ ಬುಕ್ ಪಾಸ್ ವರ್ಡ್ ಕೊಡಬೇಕು !
ವಾಷಿಂಗ್ಟನ್, ಫೆ. 8 : ಇನ್ನು ಮುಂದೆ ಅಮೇರಿಕದ ವೀಸಾಗೆ ಅರ್ಜಿ ಸಲ್ಲಿಸುವವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಪಾಸ್ ವರ್ಡ್ ಗಳನ್ನೂ ನೀಡಬೇಕಾಗಬಹುದು, ಎಂದು ಹೋಂಲ್ಯಾಂಡ್ ಸೆಕ್ಯುರಿಟಿ ಸೆಕ್ರಟರಿ ಜಾನ್ ಕೆಲ್ಲಿ ಹೇಳಿದ್ದಾರೆ.
ಭದ್ರತಾ ಅಪಾಯಗಳನ್ನೊಡ್ಡಬಹುದಾದ ಜನರುದೇಶವನ್ನು ಪ್ರವೇಶಿಸದಂತೆ ತಡೆಯಲು ಇಂತಹ ಕ್ರಮ ಮುಂದೆ ಅಗತ್ಯ ಬೀಳಬಹುದೆಂದು ಕೆಲ್ಲಿ ಹೇಳಿದ್ದಾರೆ. ಇಂತಹ ಒಂದು ಕ್ರಮಮುಸ್ಲಿಮರ ಜನಸಂಖ್ಯೆಹೆಚ್ಚಿರುವ ಏಳು ರಾಷ್ಟ್ರಗಳ ನಾಗರಿಕರು ಅಮೇರಿಕ ಪ್ರವೇಶಿಸಲು ಬಯಸಿದಾಗ ಅವರ ಹಿನ್ನೆಲೆ ತಪಾಸಣೆಗೆ ಅವಶ್ಯವಾಗಿದೆ ಎಂದು ಹೇಳಿದ ಅವರು ಇರಾನ್, ಇರಾಕ್, ಲಿಬಿಯ, ಸೊಮಾಲಿಯ, ಸುಡಾನ್, ಸಿರಿಯ ಹಾಗೂ ಯಮೆನ್ ದೇಶಗಳಲ್ಲಿ ಭದ್ರತಾ ತಪಾಸಣೆ ಅಷ್ಟೊಂದು ಹೇಳಿಕೊಳ್ಳುವ ಮಟ್ಟದಲ್ಲಿಲ್ಲದೇ ಇರುವುದರಿಂದಇಂತಹ ದೇಶಗಳಿಂದ ಬರುವ ಜನರ ಹಿನ್ನೆಲೆಯನ್ನು ತಿಳಿಯಲು ಅವರ ಸಾಮಾಜಿಕ ಜಾಲತಾಣ ಖಾತೆಗಳ ಪಾಸ್ ವರ್ಡ್ ಅಗತ್ಯ ಬೀಳುವುದು ಎಂದು ಅವರು ತಿಳಿಸಿದ್ದಾರೆ.
‘‘ಈ ದೇಶಗಳ ಜನರು ನಮ್ಮ ದೇಶಕ್ಕೆ ಬಂದಿದ್ದೇ ಆದಲ್ಲಿ ಅವರ ಪಾಸ್ ವರ್ಡ್ ಪಡೆದುಕೊಂಡು ಅವರು ಅಂರ್ತಜಾಲದಲ್ಲಿ ಏನು ಮಾಡುತ್ತಾರೆಂದು ತಿಳಿಯಬಹುದಾಗಿದೆ,’’ ಎಂದರು.
ಅವರು ಈ ನಿಟ್ಟಿನಲ್ಲಿ ಸಹಕರಿಸಲು ಸಿದ್ಧವಿಲ್ಲರೆಂದಾದರೆ ಅವರು ನಮ್ಮ ದೇಶಕ್ಕೆ ಬರುವ ಅಗತ್ಯವಿಲ್ಲ ಎಂದೂ ಅವರು ಹೇಳಿದರು. ಅದೇ ಸಮಯ ಈ ನಿಟ್ಟಿನಲ್ಲಿ ಇನ್ನೂ ದೃಢ ನಿರ್ಣಯವೊಂದನ್ನು ಕೈಗೊಳ್ಳಲಾಗಿಲ್ಲ ಎಂದು ಕೆಲ್ಲಿ ಹೇಳಿದ್ದಾರೆ.
ಮೇಲೆ ತಿಳಿಸಲಾದ ಏಳು ದೇಶಗಳ ಜನರನ್ನು ಅಮೇರಿಕ ಪ್ರವೇಶಿಸದಂತೆ ನಿರ್ಬಂಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಆದೇಶ ಹೊರಡಿಸಿದ್ದರೂಸಿಯಾಟೆಲ್ ಫೆಡರಲ್ ನ್ಯಾಯಾಧೀಶರೊಬ್ಬರು ಅದಕ್ಕೆ ತಾತ್ಕಾಲಿಕ ತಡೆ ಹೇರಿದ್ದರಿಂದ ಈ ದೇಶಗಳ ಜನರು ಈಗ ಅಮೇರಿಕಾ ಪ್ರವೇಶಿಸಬಹುದಾಗಿದೆ.