100 ವರ್ಷಗಳಲ್ಲಿ ಮಾನವರು ಭೂಮಿ ತೊರೆಯಬೇಕು : ಸ್ಟೀಫನ್ ಹಾಕಿಂಗ್
ಲಂಡನ್, ಮೇ 4: ಮಾನವ ಕುಲ ಬದುಕುಳಿಯಬೇಕಾದರೆ ಮುಂದಿನ ಶತಮಾನದಲ್ಲಿ ಮಾನವರು ಭೂಮಿಯನ್ನು ತೊರೆದು ಇನ್ನೊಂದು ಗ್ರಹದಲ್ಲಿ ವಸಾಹತುಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದು ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳುತ್ತಾರೆ. ಬಿಬಿಸಿ ನಿರ್ಮಿಸಿದ ‘ಎಕ್ಸ್‌ಪೆಡಿಶನ್ ನ್ಯೂ ಅರ್ತ್’ ಎಂಬ ಸಾಕ್ಷಚಿತ್ರದಲ್ಲಿ ವಿಜ್ಞಾನಿ ತನ್ನ ದಂಗುಬಡಿಸುವ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.
ನಮ್ಮ ಮುಂದಿರುವ ಅಪಾಯಗಳ ಹಿನ್ನೆಲೆಯಲ್ಲಿ ಇದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಹವಾಮಾನ ಬದಲಾವಣೆ, ಕ್ಷುದ್ರಗ್ರಹಗಳ ಢಿಕ್ಕಿ, ಸಾಂಕ್ರಾಮಿಕ ರೋಗಗಳು ಮತ್ತು ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳು ಭೂಗ್ರಹವನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ ಒಡ್ಡಿವೆ ಎಂದು ಅವರು ಬೆಟ್ಟು ಮಾಡಿದ್ದಾರೆ.
Next Story