ಕ್ಯಾಟಲೋನಿಯ ಸ್ವಾತಂತ್ರ್ಯ ವಿರೋಧಿಸಿ ಬೃಹತ್ ಪ್ರತಿಭಟನೆ
ಬಾರ್ಸಿಲೋನ (ಸ್ಪೇನ್), ಅ. 8: ಸ್ಪೇನ್ನಿಂದ ಕ್ಯಾಟಲೋನಿಯ ಬೇರ್ಪಡುವುದನ್ನು ವಿರೋಧಿಸಿ ಸಾವಿರಾರು ಜನರು ಕ್ಯಾಟಲೋನಿಯದ ರಾಜಧಾನಿ ಬಾರ್ಸಿಲೋನದಲ್ಲಿ ರವಿವಾರ ಬೀದಿಗಿಳಿದರು.
ಮಧ್ಯ ಬಾರ್ಸಿಲೋನದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಸ್ಪೇನ್ ಮತ್ತು ಕ್ಯಾಟಲನ್ ಧ್ವಜಗಳನ್ನು ಪ್ರದರ್ಶಿಸಿದರು ಹಾಗೂ ‘ಕ್ಯಾಟಲೋನಿಯ ಅಂದರೆ ಸ್ಪೇನ್’ ಮತ್ತು ‘ಟುಗೆದರ್ ವಿ ಆರ್ ಸ್ಟ್ರಾಂಗರ್’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
75 ಲಕ್ಷ ಜನಸಂಖ್ಯೆಯನ್ನೊಳಗೊಂಡ ಸ್ಪೇನ್ನ ಈ ಶ್ರೀಮಂತ ವಲಯವು ಸ್ಪೇನ್ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಕ್ಟೋಬರ್ 1ರಂದು ಸ್ವಾತಂತ್ರ ಜನಮತಗಣನೆ ನಡೆಸಿತ್ತು. 90 ಶೇಕಡ ಮಂದಿ ವಿಭಜನೆ ಪರವಾಗಿ ಮತ ಹಾಕಿದ್ದರು.
Next Story