ಉಡುಪಿ: ಡಿ.21ರಿಂದ ಕೆಮ್ತೂರು ತುಳು ನಾಟಕ ಪರ್ಬ
ಉಡುಪಿ, ಡಿ.18: ತುಳುಕೂಟ ಉಡುಪಿ ವತಿಯಿಂದ ಪ್ರತಿ ವರ್ಷ ನಡೆಯುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ಕೆಮ್ತೂರು ತುಳು ನಾಟಕ ಪರ್ಬ ಡಿ.21ರಿಂದ 27ರವರೆಗೆ ಏಳು ದಿನಗಳ ಕಾಲ ಪ್ರತಿದಿನ ಸಂಜೆ 6:30ಕ್ಕೆ ಉಡುಪಿ ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ಡಿ.21ರಂದು ಸಂಜೆ 5:45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕೆಮ್ತೂರು ತುಳು ನಾಟಕ ಪರ್ಬವನ್ನು ಉದ್ಘಾಟಿಸುವರು. ಮಣಿಪಾಲ ಅಕಾಡೆಮಿ ಆಪ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ. ಶಾಂತಾರಾಮ್, ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ನಂಬಿಯಾರ್, ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಣೇಶ್ ರಾವ್, ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾವಹಿಸುವರು.
ಈ ಬಾರಿ ಸ್ಪರ್ಧೆಗೆ ಒಟ್ಟು ಏಳು ತುಳು ನಾಟಕಗಳನ್ನು ಆಯ್ಕೆ ಮಾಡಲಾಗಿದೆ. ಡಿ.21ರಂದು ರಂಗಸುದರ್ಶನ ಸಸಿಹಿತ್ಲು ತಂಡದಿಂದ ‘ಒಂಜಿ ಸಿರಿ ರಡ್ಡ್ ಬೊಂಡ’ (ರಚನೆ-ನಿರ್ದೇಶನ: ಪರಮಾನಂದ ಸಾಲ್ಯಾನ್), ಡಿ.22ರಂದು ಕರಾವಳಿ ಕಲಾವಿದರು ಮಲ್ಪೆಇವರಿಂದ ‘ಮಂತ್ರದೇವತೆ’ (ರಚನೆ- ನಿರ್ದೇಶನ :ದಿನೇಶ್ ಆಚಾರ್ಯ ಸುಬ್ರಹ್ಮಣ್ಯ ನಗರ), ಡಿ.23ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ‘ಚಂದ್ರೆ ಎನ್ನೊಟ್ಟುಗುಲ್ಲೆ’ (ನಿರ್ದೇಶನ: ಸಂತೋಷ್ ನಾಯಕ್ ಪಟ್ಲ), ಡಿ.24ರಂದು ಉಡುಪಿ ಅಮಾಸ ಕಲಾತಂಡದಿಂದ ‘ಬರ್ಬರೀಕ’ (ನಿರ್ದೇಶನ:ಬಾಸುಮ ಕೊಡಗು).
ಡಿ.25ರಂದು ಗಂಜಿಮಠ ಬಂಗಾರ್‌ಕಲಾವಿದೆರ್ ‘ಭಾಸ್ಕರೆ ಬಂಗೊಡುಲೆ’್ಲ (ನಿರ್ದೇಶನ:ಎಂ.ಜಿ.ಪೂಜಾರಿ), ಡಿ.26ರಂದು ರಂಗ ಸನ್ನಿಧಿ ನೀರೆಬೈಲೂರು ಇವರಿಂದ ‘ಸರ್ಪ ಸಂಪಿಗೆ’ (ನಿರ್ದೇಶನ:ಚೇತನ್ ನೀರೆಬೈಲೂರು), ಡಿ.27 ರಂದು ಕೊಡವೂರು ನವಸುಮ ರಂಗಮಂಚದಿಂದ ‘ದುರ್ದುಂಡೆ ದ್ರೌಣಿ’ (ರಚನೆ-ನಿರ್ದೇಶನ:ಬಾಲಕೃಷ್ಣ ಕೊಡವೂರು).