‘ಕಾರಕಾರ್ಥಪ್ರಬೋಧಿನಿ’ ಸಂಸ್ಕೃತ ಕೃತಿ ಬಿಡುಗಡೆ
ಉಡುಪಿ, ಜ.15: ಮಾಹೆ ಡೀಮ್ಡ್ ವಿವಿಯ ಮಣಿಪಾಲ ಯುನಿವರ್ಸಲ್ ಪ್ರೆಸ್ ಹಾಗೂ ದ್ವೈತ ಫಿಲಾಸಪಿ ರಿಸೋರ್ಸ್ ಸೆಂಟರ್‌ಗಳು ಜಂಟಿಯಾಗಿ ಪ್ರಕಟಿಸಿದ ‘ಕಾರಕಾರ್ಥ ಪ್ರಬೋಧಿನಿ’ ಸಂಸ್ಕೃತ ಕೃತಿಯನ್ನು ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಇಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.
ಮಲಯಾಳ ಭಾಷೆಯಲ್ಲಿ ವಾಸುದೇವನ್ ಪೊತ್ತಿ ಅವರು ಬರೆದಿದ್ದ ಈ ಮೂಲ ಕೃತಿಯನ್ನು ಬೆಂಗಳೂರು ಕರ್ನಾಟಕ ಸಂಸ್ಕೃತ ವಿದ್ಯಾಲಯದ ಶಾಸ್ತ್ರ ವಿಭಾಗದ ಸಹಾಯಕ ಪ್ರೊಪೆಸರ್ ಡಾ.ಶಿವಾನಿ ವಿ. ಅವರು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ.
ದ ಕಾರಕಾರ್ಥ ಪ್ರಬೋಧಿನೀ ಎಂಬ ಪುಸತಿಕವನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.
ಸಂಸ್ಕೃತ ಭಾಷೆಗೆ ವ್ಯಾಕರಣ ಅತಿಮುಖ್ಯ. ಈ ಕೃತಿ ಸಂಸ್ಕೃತ ಕಲಿಕೆಗೆ ತುಂಬಾ ಸಹಾಯ ಮಾಡಲಿದೆ. ಹಲವು ಪದಗಳಿರುವ ವಾಕ್ಯವನ್ನು ರಚಿಸಲು ಕಾರಕ ವಿಭಕ್ತಗಳು ಬೇಕಾಗಿದ್ದು, ಕ್ರಿಯಾ ಕಾರಕಗಳ ಸರಿಯಾದ ಬಳಕೆ ಕುರಿತು ಈ ಕೃತಿ ವಿವರಿಸುತ್ತದೆ ಎಂದು ಪೇಜಾವರಶ್ರೀಗಳು ನುಡಿದರು.
ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಮಾಹೆ ಡೀಮ್ಡ್ ವಿವಿಯ ಕುಲಪತಿ ಡಾ.ಎಚ್. ವಿನೋದ್ ಭಟ್ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಡಿಪಿಆರ್‌ಸಿಯ ಸಂಯೋಜಕ ಶ್ರೀನಿವಾಸ ಕುಮಾರ್ ಎನ್.ಆಚಾರ್ಯ ಸ್ವಾಗತಿಸಿದರೆ, ಸಂಸ್ಕೃತ ಕಾಲೇಜಿನ ವಿದ್ವಾನ್ ಡಾ.ಗುರುಮೂರ್ತಿ ಆಚಾರ್ಯ ಕೃತಿ ಪರಿಚಯ ಮಾಡಿದರು. ಲೇಖಕಿ ಡಾ.ಶಿವಾನಿ ಅನುಭವನ್ನು ಹಂಚಿಕೊಂಡರು. ಡಾ.ಅರ್ಜುನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮಣಿಪಾಲ ಯುನಿರ್ವಸಲ್ ಪ್ರೆಸ್‌ನ ಪ್ರಧಾನ ಸಂಪಾದಕಿ ಡಾ.ನೀತಾ ಇನಾಂದಾರ್ ಉಸ್ಥಿತರಿದ್ದರು.