ಗುರುರಾಜ್ ಸನಿಲ್‌ಗೆ ‘ಕೃಷ್ಣಾನಂದ ಕಾಮತ್ ಸಾಹಿತ್ಯ’ ಪ್ರಶಸ್ತಿ
ಉಡುಪಿ, ಫೆ.12: ಉಡುಪಿಯ ಉರಗತಜ್ಞ, ಸಾಹಿತಿ, ಸಮಾಜ ಸೇವಕ ಗುರುರಾಜ್ ಸನಿಲ್ 2017-18ನೆ ಸಾಲಿನ ‘ಕೃಷ್ಣಾನಂದ ಕಾಮತ್ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಕಳೆದ 25 ವರ್ಷಗಳಲ್ಲಿ ಸುಮಾರು 20ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಸಂರಕ್ಷಿಸಿದ ದಾಖಲೆ ಸನಿಲ್ ಅವರದ್ದು. ಆ ಪೈಕಿ 54 ಕಾಳಿಂಗ ಸರ್ಪಗಳೂ ಸೇರಿವೆ. ಹಾವು ನಾವು, ದೇವರ ಹಾವು, ನಾಗಬೀದಿಯೊಳಗಿಂದ, ಹುತ್ತದ ಸುತ್ತಮುತ್ತ, ವಿಷಯಾಂತರ ಮತುತಿ ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು ಎಂಬ ಪುಕಗಳನ್ನು ಇವರು ಬರೆದಿದ್ದಾರೆ. ಅವರ ನಾಗಬೀದಿಯೊಳ ಗಿಂದ ಎಂಬ ನಾಲ್ಕನೇ ಕೃತಿಯಿಂದ ಆಯ್ದ ‘ನಮ್ಮ ನಂಬಿಕೆ ನಾಗನಿಗೆ ವರವೇ ಶಾಪವೇ?’ ಎಂಬ ಲೇಖನವು ಮಂಗಳೂರು ವಿವಿ ಮೂಲಕ ಬಿ.ಕಾಂ ಪದವಿಗೆ ಪಠ್ಯವಾಗಿದೆ.
ಹೊನ್ನಾವರದ ಡಾ.ಕೃಷ್ಣಾನಂದ ಕಾಮತ್ ಪ್ರತಿಷ್ಠಾನ ನೀಡಲಾಗುವ ಈ ಪ್ರಶಸ್ತಿಯು, ಪ್ರಶಸ್ತಿ ಫಲಕಗಳೊಂದಿಗೆ 25,000 ರೂ. ಗೌರವಧನವನ್ನು ಒಳ ಗೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಜೋತ್ನಾ ಕೃಷ್ಣಾನಂದ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story