ಸಮಕಾಲೀನ ಸಂದರ್ಭದಲ್ಲಿ ಮಹಿಳಾ ಬಿಕ್ಕಟ್ಟುಗಳು : ಡಾ.ಎಂ.ಉಷಾ
ಆಳ್ವಾಸ್ ನುಡಿಸಿರಿ
ಮೂಡುಬಿದಿರೆ, (ರತ್ನಾಕರವರ್ಣಿ ವೇದಿಕೆ) ನ. 18 : ಸಮಕಾಲೀನ ಸಂದರ್ಭದಲ್ಲಿಯೂ ಕೂಡಾ ಮಹಿಳೆಯರ ಬಗ್ಗೆ ಹಲವು ವಿಚಾರಗಳ ಚರ್ಚೆಗಳು ನಡೆಯುತ್ತವೆ. ಮೀಟೂ, ಶಬರಿಮಲೆ ಪ್ರವೇಶ, ಅನೈತಿಕ ಸಂಬಂಧ, ಸ್ಯಾನಿಟರ್ ಪ್ಯಾಡ್, ತ್ರಿವಳಿ ತಲಾಕ್‍ನ ಮುಂತಾದ ವಿಷಯಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತನಾಡುವ ಮೂಲಕ ಮಹಿಳೆಯರ ವಿಷಯಗಳನ್ನು ಸರಕುಗಳಾಗಿ ನೋಡುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ ಎಂದು ಡಾ.ಎಂ. ಉಷಾ ಆತಂಕ ವ್ಯಕ್ತಪಡಿಸಿದರು.
ಅವರು ಆಳ್ವಾಸ್ ನುಡಿಸಿರಿಯ ಮೂರನೇ ದಿನ ನಡೆದ ಮೊದಲ ವಿಶೇಷೋಪನ್ಯಾಸದಲ್ಲಿ ಸಮಕಾಲೀನ ಸಂದರ್ಭ : ಮಹಿಳಾ ಬಿಕ್ಕಟ್ಟುಗಳು ಎಂಬ ವಿಷಯದ ಕುರಿತು ಮಾತನಾಡಿದರು. ಮಹಿಳೆಗೆ ಅನ್ಯಾಯವಾದಾಗ ಆಕೆ ಅದನ್ನು ವಿರೋಧಿಸಿ ಮಾತನಾಡಿದಾಗ ಆಕೆಯನ್ನು ಕೂಡು ಕುಂಟುಂಬದ ಒಳಗಡೆ ತಂದು ಬಾಯಿ ಮಚ್ಚಿಸುವಂತಹ ಕೆಲಸಗಳು ನಡೆಯುತ್ತಿವೆ. ತಮಗೆ ಸಮಾನತೆ ನೀಡಿ ಎಂದು ಕೋರ್ಟ್‍ಗೆ ಮೊರೆ ಹೋದಗಲೂ ಒಂದು ವರ್ಗದ ಮಹಿಳೆಯರಿಂದಲೇ ವಿರೋಧಗಳು ವ್ಯಕ್ತವಾಗುತ್ತಿವೆ. ಮಹಿಳೆ ಬಳಸುತ್ತಿರುವ ಸ್ಯಾನಿಟರ್ ಪ್ಯಾಡ್ ಮೇಲೆ ಹಾಕಿರುವ ಜಿ.ಎಸ್.ಟಿಯನ್ನು ತೆಗೆದು ಹಾಕ ಬೇಕೆಂಬ ಚರ್ಚೆಗಳು ನಡೆದಾಗಲೂ ಆಕೆಯನ್ನು ಮರಳಿ ಬಟ್ಟೆಯೆಡೆಗೆ ಸೆಳೆಯುವ ಕೆಲಸಗಳು ನಡೆಯುತ್ತಿರುವ ಮೂಲಕ ಸಮಕಾಲೀನ ಸಂದರ್ಭದಲ್ಲಿಯೂ ಆಕೆಯ ಬಗ್ಗೆ ಹಲವು ಬಿಕ್ಕಟ್ಟುಗಳು ಮೂಡುವಂತೆ ಮಾಡಲಾಗುತ್ತಿದೆ.
ಪತ್ರಕರ್ತರು ಸುದ್ದಿ ಬೇಗ ಕೊಡಬೇಕು ನಿಜ ಆದರೆ ಸರಿಯಾಗಿ ವಿಮರ್ಶೆ ಮಾಡದೆ ಸುದ್ದಿಗಳನ್ನು ಹಾಕುವುದು ಸರಿಯಲ್ಲ. ಜಗತ್ತಿನಲ್ಲಿ ಎಲ್ಲರಿಗೂ ಬದುಕುವ ಹಕ್ಕು ಇದೆ ಆಕೆಗೆ ಸಂಪೂರ್ಣವಾದ ಹಕ್ಕನ್ನು ಕೊಡಬೇಕು. ಆದರೆ ಬೌತಿಕತೆಯ ಜಾಲಗಳನ್ನು ಹುಟ್ಟು ಹಾಕುವ ಕೆಲಸಗಲು ನಡೆಯುತ್ತವೆ. ಸಮಸ್ಯೆಗಳು ಮೀಸಲಾತಿಯ ಸಂದರ್ಭದಿಂದಲೂ ಇದೆ. ಎಂದ ಅವರು ಮಹಿಳಾ ವಿಚಾರಗಳ ಬಗ್ಗೆ ನಿಜವಾಗಿಯೂ ಮಿಸ್‍ಯೂಸ್ ಆಗುತ್ತಿದೆಯೇ ಅಥವಾ ಪ್ರೊಜೆಕ್ಟ್ ಮಾಡಲಾಗುತ್ತಿದೆಯೇ ಎಂಬ ಬಿಕ್ಕಟ್ಟುಗಳು ಉಳಿದುಕೊಂಡಿವೆ ಎಂದರು.
''ಆ ದಿನಗಳಲ್ಲಿ ಮಹಿಳೆಯರು ತಮ್ಮ ಮನೆಯ ದೇವರುಗಳನ್ನು ಮುಟ್ಟಿ ಕ್ರಾಂತಿ ಮಾಡುತ್ತಿದ್ದರೆ ಇಂದು ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ತೊಂದರೆಯಾಗುತ್ತಿರಲಿಲ್ಲ, ಎಲ್ಲರೂ ಒಟ್ಟಾಗಿ ಸೇರಿ ಅಭಿಪ್ರಾಯ ರೂಪಿಸುವಂತಹ ಕೆಲಸ ಆಗುವ ಮೂಲಕ ಕಾನೂನನ್ನು ಮಾಡಿದ್ದರೆ ಇವತ್ತು 200 ವರ್ಷಗಳ ಇತಿಹಾಸವಿರುವ ಅಭಿಪ್ರಾಯಗಳಿಗೆ ತೊಂದರೆಯಾಗುತ್ತಿರಲಿಲ್ಲ''
-ಡಾ. ಎಂ. ಉಷಾ