ಕನ್ನಡ ನಮ್ಮ ಭಾವದ ಭಾಷೆ: ಎಚ್.ಚಂದ್ರಶೇಖರ ಕೆದ್ಲಾಯ
ಪ್ರಥಮ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಬ್ರಹ್ಮಾವರ, ಜ.9: ಕನ್ನಡ ನಮ್ಮ ಭಾವದ ಭಾಷೆಯಾಗಿದೆ. ಅಂತರಂಗದಲ್ಲಿ ನೆಲೆಯಾಗಿ ನಮ್ಮ ಮನದ ಭಾವನೆಗಳು ಸಹಜವಾಗಿ ಮಾತೃ ಭಾಷೆಯಲ್ಲಿ ಬಿಂಬಿತವಾಗುತ್ತದೆ ಎಂದು ಖ್ಯಾತ ಖ್ಯಾತ ಗಮಕಿ, ನಿವೃತ್ತ ಕನ್ನಡ ಭಾಷಾ ಅಧ್ಯಾಪಕ ಎಚ್.ಚಂದ್ರಶೇಖರ ಕೆದ್ಲಾಯ ಹೇಳಿದ್ದಾರೆ.
ಬ್ರಹ್ಮಾವರ ತಾಲೂಕು ಘೋಷಣೆಯಾದ ಬಳಿಕ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆದ ಪ್ರಥಮ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಬ್ರಹ್ಮಾವರ ತಾಲೂಕು ಘೋಷಣೆಯಾದ ಬಳಿಕ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದ ಬಂಟರ ವನದಲ್ಲಿನಡೆದಪ್ರಥಮಬ್ರಹ್ಮಾವರತಾಲೂಕುಕನ್ನಡಸಾಹಿತ್ಯಸಮ್ಮೇಳನದಅ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕನ್ನಡ ಪರವಾಗಿ ಮಾತನಾಡುವ ರಾಜಕಾರಣಿಗಳಿಗೆ ಭಾಷೆಯನನು ಉಳಿಸುವ ಆಸಕ್ತಿ ಇಲ್ಲವಾಗಿದೆ. ಕನ್ನಡ ಶಾಲೆಗಳಿಗೆ ಸರಿಯಾದ ಶಿಕ್ಷಕರನ್ನು ನೀಡಿದಲ್ಲಿ ಶಾಲೆಯ ಜೊತೆ ಭಾಷೆ ಕೂಡಾ ಉಳಿದು ಬೆಳೆಯುತ್ತದೆ ಎಂದರು.
ಸಮ್ಮೇಳನದ ಪ್ರಯುಕ್ತ ಆಯೋಜಿಸಲಾದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಸಾಹಿತ್ಯ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು ಎಂಬ ಉದ್ದೇಶ ದಿಂದ ಸಾಹಿತ್ಯ ಸಮ್ಮೆಳನಗಳು ನಡೆಯುತ್ತವೆ. ನಾಡು ಎಲ್ಲಕ್ಕಿಂತ ದೊಡ್ಡದು. ನಾಡಿನ ನುಡಿಯನ್ನು ಉಳಿಸುವುದು ಎಲ್ಲಕ್ಕಿಂತ ದೊಡ್ಡದು ಎಂದರು.
ವೇದಿಕೆಯಲ್ಲಿ ಬಂಟರ ಭವನದ ಸಂಚಾಲಕ ಸುದರ್ಶನ ಹೆಗ್ಡೆ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತಿಮ್ಮಪ್ಪ ಹೆಗ್ಡೆ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಕುಮಾರ್, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಶೋಕ್ ಭಟ್, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್‌ಚಂದ್ರನಾಯಕ್, ರಾಘವೇಂದ್ರ ಕುಂದರ್, ಪುಂಡಲೀಕ ಮರಾಠೆ, ಸತೀಶ್ ವಡ್ಡರ್ಸೆ ಮೊದಲಾದವರು ಉಪಸ್ಥಿತರಿದ್ದರು.
ಪಲ್ಲವಿ ಮತ್ತು ಅಕ್ಷತಾ ನಾಡಗೀತೆ ಹಾಡಿದರು. ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತನ್ನಾಡಿದರು. ಕಾರ್ಯದರ್ಶಿ ಮೋಹನ ಉಡುಪ ಗೌರವಿಸಿ, ಶ್ರೀಪತಿ ಹೇರ್ಳೆ ಸನ್ಮಾನಿತರನ್ನು ಪರಿಚಯಿಸಿದರು. ಮನೋಹರ ಪಿ. ವಂದಿಸಿ, ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೆ ಮೊದಲು ಸಮೇಳನಾಧ್ಯಕ್ಷ ಚಂದ್ರಶೇಖರ ಕೆದ್ಲಾಯ ಮತ್ತು ಪೂರ್ಣಿಮ ಕೆದ್ಲಾಯರನ್ನು ವಿಶೇಷ ಅಲಕೃಂತ ವಾಹನದಲ್ಲಿ ಮೆರವಣಿಗೆಯಲ್ಲಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಿಂದ ನಗರದ ಮುಖ್ಯರಸ್ತೆಗಳ ಮೂಲಕ ಕರೆತರಲಾಯಿತು. ಬ್ರಹ್ಮಾವರ ತಾಲೂಕು ಆದ ಬಳಿಕ ಪ್ರಥಮ ಬಾರಿ ನಡೆದ ಸಮ್ಮೇಳನದಲ್ಲಿ ಪರಿಸರದ ಶಾಲಾ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದರು.