ಪ್ರಭಾಕರ್ ನೀರ್‌ಮಾರ್ಗ ಅವರ ಕೃತಿಗಳ ಅನಾವರಣ
ಮಂಗಳೂರು, ಮಾ.5: ಮಂಗಳೂರು ವಿವಿಯ ಉಪಕುಲಸಚಿವ ಪ್ರಭಾಕರ್ ನೀರ್‌ಮಾರ್ಗ ಅವರ ‘ಕಾಲಚಕ್ರ, ನೆಲದ ದನಿ ಮತ್ತು ಕಾರ್ಣಿಕ’ ಕೃತಿಗಳನ್ನು ತುಳು ಅಕಾಡಮಿಯ ಸದಸ್ಯ ಎ.ಶಿವಾನಂದ ಕರ್ಕೇರ ಇತ್ತೀಚೆಗೆ ನಡೆದ ಮಂಗಳೂರು ಆಕಾಶವಾಣಿಯ ‘ಸ್ವರಮಂಟಮೆ’ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು ನೀರ್‌ಮಾರ್ಗರ ಕೃತಿಗಳು ತುಳುನಾಡಿನ ಬದುಕು ಜನಜೀವನದ ದಾಖಲೆಯ ಮಹತ್ವದ ಕೃತಿಗಳಾಗಿವೆ ಎಂದು ಬಣ್ಣಿಸಿದರು.
ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಡಾ.ವಿಶ್ವನಾಥ ಬದಿಕ್ಕಾನ ಮತ್ತು ಉಪನ್ಯಾಸಕ ಚೇತನ್ ಮುಂಡಾಜೆ ಕೃತಿಗಳ ವಿಮರ್ಶೆ ಮಾಡಿದರು.
ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.
Next Story