ಕೋವಿಡ್ ವಿರುದ್ಧದ ಹೋರಾಟಕ್ಕೆ ‘ಎಂಐಟಿಇ’ ಸಿದ್ಧ
ಮಂಗಳೂರು, ಜೂ.24: ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನ ಸಹಕಾರಿಯಾಗಿದೆ. ಜಗತ್ತು ಸಾಂಕ್ರಾಮಿಕ ರೋಗ ವನ್ನು ಎದುರಿಸುತ್ತಿರುವ ವಿಧಾನ ಬದಲಾಯಿಸಿದೆ. ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್‌ಯ (ಎಂಐಟಿಇ) ವಿದ್ಯಾರ್ಥಿಗಳು ಈ ಹೋರಾಟಕ್ಕೆ ಮುಂದಾಗಿದ್ದಾರೆ.
ವಿದ್ಯಾರ್ಥಿಗಳು ಕಾರ್ಯಸಾಧ್ಯವಾದ ಪರಿಹಾರಗಳನ್ನು ವಿನ್ಯಾಸಗೊಳಿಸಿದ್ದು, ಇದು ಕೋವಿಡ್-19ನ್ನು ಎದುರಿಸುವ ಜನರಿಗೆ ಸಹಾಯ ಮಾಡ ಲಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೋವಿಡ್-19 ಕುರಿತು ನಿರ್ಣಾಯಕ ಮಾಹಿತಿಯನ್ನು ಒದಗಿಸುವ ‘ಕೊರೋನ ಲೈವ್ ಟ್ರಾಕಿಂಗ್’ ವೆಬ್‌ಸೈಟ್ ಮತ್ತು ಕಡಿಮೆ ವೆಚ್ಚದ ಸ್ವಯಂಚಾಲಿತ ಸ್ಯಾನಿಟೈಜರ್ ವಿತರಕ ಯಂತ್ರ ವಿನ್ಯಾಸಗೊಳಿಸಿದ್ದಾರೆ.
ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಜರ್: ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಅಂತಿಮ ವರ್ಷದ ವಿದ್ಯಾರ್ಥಿ ಶ್ರೀರಾಮ್ ಎಸ್., ಸಂವೇದಕ ಆಧಾರಿತ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಜರ್ ಡಿಸ್ಪೆನ್ಸರ್‌ನ್ನು ವಿನ್ಯಾಸಗೊಳಿಸಿದ್ದಾರೆ. ಇದು ಪೋರ್ಟಬಲ್ ಮತ್ತು ಕಡಿಮೆ ವೆಚ್ಚದಲ್ಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಜರ್ ವಿತರಣೆಯು ತುಂಬ ಅಗತ್ಯ. ಇದು ಉತ್ಪಾದನಾ ವೆಚ್ಚವನ್ನು 1000 ರೂ.ಗಿಂತ ಕಡಿಮೆ ಹೊಂದಿದೆ.
ಕೋವಿಡ್-19ರ ಸಮುದಾಯ ಹರಡುವಿಕೆಯನ್ನು ತಡೆಯಲು ಇದೊಂದು ಹೆಜ್ಜೆ ಹತ್ತಿರದಲ್ಲಿದೆ. ಸ್ಪರ್ಶ-ಮುಕ್ತ ಸ್ಯಾನಿಟೈಜರ್ ವಿತರಕವು ಕೈಯನ್ನು ಕಂಡುಹಿಡಿಯಲು ಸಂವೇದಕ ಬಳಸುತ್ತದೆ. ಇದು ಸ್ಯಾನಿಟೈಜರ್‌ನ್ನು ವಿತರಿಸುವ ಪಂಪ್‌ನ್ನು ಸಕ್ರಿಯಗೊಳಿಸುತ್ತದೆ. ಈ ಮಾದರಿಯು ಯುಎಸ್‌ಬಿ ಚಾರ್ಜರ್‌ನಿಂದ ಪವರ್ ಸಂಪರ್ಕ ಮಾಡಲು ಬಳಸುತ್ತದೆ. ಅದನ್ನು ಟೇಬಲ್ ಅಥವಾ ಗೋಡೆಯ ಮೇಲೆ ಅಳವಡಿಸಬಹುದಾಗಿದೆ. ಈ ಡಿಸ್ಪೆನ್ಸರ್‌ನ್ನು ಬೆಂಗಳೂರಿನ ಆಡಿಯಾ ಡೆಂಟಲ್ ಕ್ಲಿನಿಕ್‌ನಲ್ಲಿ ಅನುಷ್ಠಾನಗೊಳಿಸಲಾಗಿದೆ. ವೀಡಿಯೊ ಲಿಂಕ್-https://youtu.be/U6SmGtQqHa8
ಕರೋನಾ ಟ್ರಾಕರ್ ಎಂಬ ವೆಬ್‌ಸೈಟ್
ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ (ಐಎಸ್‌ಇ) ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜಾಯ್ ಡಿಸೋಜ, ನಿರಂಜನ್ ಮಲ್ಯ, ಶಶಾಂಕ್ ಮತ್ತು ಪ್ರಣೀತ್ ಅವರನ್ನು ಒಳಗೊಂಡ ತಂಡವು ಕರೋನಾ ಟ್ರಾಕರ್ ಎಂಬ ವೆಬ್‌ಸೈಟ್‌ನ್ನು ವಿನ್ಯಾಸಗೊಳಿಸಿದೆ.
ಸಕಾರಾತ್ಮಕ ಪ್ರಕರಣಗಳ ಸಂಖ್ಯೆ, ಚೇತರಿಕೆ ಮತ್ತು ಸಾವಿನ ಸಂಖ್ಯೆ ಮತ್ತು ಪ್ರದೇಶದ ಕೋವಿಡ್-19 ನ ಇತರ ವಿವರ ಇದರಲ್ಲಿ ಲಭ್ಯವಾಗಿದೆ. ಈ ಜಾಲತಾಣ ಭಾರತದ ಸಂವಾದಾತ್ಮಕ ಚಾರ್ಟ್‌ನ್ನು ಸಹ ತೋರಿಸುತ್ತದೆ. ಅದರ ಮೂಲಕ ಬಳಕೆದಾರರು ವಿವಿಧ ರಾಜ್ಯವಾರು ಕೋವಿಡ್-19 ಪ್ರಕರಣಗಳ ವಿವರ ಪಡೆಯಬಹುದು. ವೆಬ್‌ಲಿಂಕ್- http://joydsouza.me/corona-tracker/
ನಾವೀನ್ಯತೆ ಉತ್ತೇಜಿಸಲು ‘ಎಂಐಟಿಇ’ ಅನುಕೂಲಕರ ಪರಿಸರ ವ್ಯವಸ್ಥೆ ಸ್ಥಾಪಿಸಿದೆ. ಪ್ರತಿ ವರ್ಷ ಅತ್ಯುತ್ತಮ ರಾಷ್ಟ್ರಮಟ್ಟದಲ್ಲಿ ಪುರಸ್ಕಾರ ಪಡೆದ ಪರಿಹಾರ ಆವಿಷ್ಕರಿಸಿದೆ. ಸಂಸ್ಥೆಯಲ್ಲಿನ ತಂತ್ರಜ್ಞಾನ ಕ್ಲಬ್‌ಗಳ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ನಾವೀನ್ಯತೆಯ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಉತ್ತೇಜಿಸಲಾಗುತ್ತಿದೆ. ಜತೆಗೆ ಪರಿಹಾರಗಳನ್ನು ಅಭಿವೃದ್ಧಿ ಪಡಿಸಲು ವೇದಿಕೆ ಒದಗಿಸುತ್ತದೆ. ಸಂಸ್ಥೆಯು ಯುವ ಉದ್ಯಮಿಗಳಿಗೆ ಒಂದು ಏರುನೆಲೆಯಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.