ಉಡುಪಿ: ತುಳು ಭಾವಗೀತೆ ಸ್ಪರ್ಧೆ
ಉಡುಪಿ, ಫೆ.7: ಉಡುಪಿ ತುಳುಕೂಟದ ವತಿಯಿಂದ ಉಡುಪಿ ಬಾಲಕಿಯರ ಪಪೂ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸ ಲಾದ 21ನೆ ವರ್ಷದ ದಿ.ನಿಟ್ಟೂರು ಸಂಜೀವ ಭಂಡಾರಿ ನೆನಪಿನ ತುಳು ಭಾವಗೀತೆ ಸ್ಪರ್ಧೆಯನ್ನು ಲಯನ್ಸ್ ಜಿಲ್ಲಾ ಸಂಯೋಜಕಿ ನಿರುಪಮಾ ಪ್ರಸಾದ್ ಶೆಟ್ಟಿ ರವಿವಾರ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಣಿಪಾಲ ವಿವಿಯು ತುಳು ಪೀಠವನ್ನು ಸ್ಥಾಪಿಸಲು ಉದ್ದೇಶಿ ಸಿದ್ದು, ಇದರಿಂದ ಮುಂದೆ ತುಳು ಅಧ್ಯಯನ ಹಾಗೂ ತುಳು ಸಂಬಂಧಿಸಿದ ಕಾರ್ಯ ಕ್ರಮಗಳಿಗೆ ಆರ್ಥಿಕ ಸಹಾಯ ದೊರೆಯಲಿದೆ. ಪೋಷಕರು ಮನೆ ಯಲ್ಲಿ ಮಕ್ಕಳೊಂದಿಗೆ ತುಳು ಭಾಷೆಯಲ್ಲೇ ಮಾತನಾಡಿ ಭಾಷೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸೋಲ್ಹಾಪುರ ತುಳುಕೂಟ ಅಧ್ಯಕ್ಷ ತ್ಯಾಗರಾಜ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಪ್ರೌಢಶಾಲಾ ಮುಖ್ಯಸ್ಥ ವಿಶ್ವನಾಥ ಬಾಯರಿ ಭಾಗವಹಿಸಿದ್ದರು. ಉಪಾಧ್ಯಕ್ಷರಾದ ಮನೋರಮಾ ಶೆಟ್ಟಿ, ಯು.ಜೆ.ದೇವಾಡಿಗ ಉಪಸ್ಥಿತರಿ ದ್ದರು. ಸ್ಪರ್ಧೆಯ ಸಂಚಾಲಕ ವಿವೇಕಾನಂದ ಎನ್. ಸ್ವಾಗತಿಸಿದರು. ಕಾರ್ಯ ದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು.