ವಾಟ್ಸ್‌ಆ್ಯಪ್ ನಿಮ್ಮ ವಿವರಗಳನ್ನು ಫೇಸ್‌ಬುಕ್‌ಗೆ ನೀಡುವುದನ್ನು ತಡೆಯುವುದು ಹೇಗೆ ?
ವಾಷಿಂಗ್ಟನ್, ಆ.26: ವಾಟ್ಸ್‌ಆ್ಯಪ್ ಶೀಘ್ರದಲ್ಲಿಯೇ ನಿಮ್ಮ ಕೆಲವೊಂದು ವಿವರಗಳನ್ನು ಫೇಸ್‌ಬುಕ್ ನಲ್ಲಿ ಶೇರ್ ಮಾಡಲಿದೆ. ಇದರಿಂದ ಫೇಸ್‌ಬುಕ್ ನಿಮ್ಮ ಆಸಕ್ತಿಗೆ ತಕ್ಕಂತಹ ಜಾಹೀರಾತುಗಳನ್ನು ನಿಮಗೆ ತೋರಿಸಲಿದೆ. ನಿಮ್ಮ ವಾಟ್ಸ್‌ಆ್ಯಪ್ನಲ್ಲಿ ನೀವು ಜಾಹೀರಾತುಗಳನ್ನು ನೋಡುವುದು ಸಾಧ್ಯವಿಲ್ಲವಾದರೂ ನಿಮ್ಮ ಫೇಸ್‌ಬುಕ್ ಫ್ರೆಂಡ್ ಸಜೆಶನ್ ಗಳು ಹಾಗೂ ನಿಮ್ಮ ವಾಟ್ಸ್‌ಆ್ಯಪ್ ವಿವರಗಳಿಗನುಗುಣವಾಗಿ ಜಾಹೀರಾತುಗಳನ್ನು ಕಾಣಬಹುದು. ಇವು ನಿಮಗೆ ಇಷ್ಟವಿಲ್ಲವೆಂದಾದರೆ ಹಾಗೂ ಫೇಸ್‌ಬುಕ್ ನಿಮ್ಮ ವಾಟ್ಸ್‌ಆ್ಯಪ್ ವಿವರಗಳನ್ನು ನೋಡಬಾರದೆಂದು ನಿಮಗೆ ಅನಿಸುವುದಾದರೆ ನೀವು ವಾಟ್ಸ್‌ಆ್ಯಪ್ನಲ್ಲಿ ಸಂಬಂಧಿತ ಸೆಟ್ಟಿಂಗ್ ಗಳನ್ನು ಡಿಸೇಬಲ್ ಮಾಡಬೇಕು. ಫೇಸ್‌ಬುಕ್ನೊಂದಿಗೆ ನಿಮ್ಮ ವಾಟ್ಸ್‌ಆ್ಯಪ್ ವಿವರಗಳನ್ನು ಶೇರ್ ಮಾಡಬಾರದೆಂದಾಗಿದ್ದರೆ ನೀವು ಹೀಗೆ ಮಾಡಬೇಕು.
ಮೊದಲನೆಯದಾಗಿ ವಾಟ್ಸ್‌ಆ್ಯಪ್ನ ಲೇಟೆಸ್ಟ್ ಟರ್ಮ್ಸ್ ಆಫ್ ಸರ್ವಿಸ್ ಗೆ ನೀವು ಒಪ್ಪಬೇಡಿ. ಬದಲಾವಣೆಗೊಂಡಿರುವ ವಾಟ್ಸ್‌ಆ್ಯಪ್ ಆಫ್ ಸರ್ವಿಸ್ ಬಗ್ಗೆ ವಾಟ್ಸ್‌ಆ್ಯಪ್ ನಿಮಗೆ ನೋಟಿಫೈ ಮಾಡಬಹುದು. ನೀವು ವಾಟ್ಸ್‌ಆ್ಯಪ್ ತೆರೆದಾಗ ಅಲ್ಲಿನ ಒಂದು ಪೇಜ್ ಈ ಟರ್ಮ್ಸ್ ಆಫ್ ಸರ್ವಿಸ್ ಬಗ್ಗೆ ಹೇಳುತ್ತದೆ. ಆಗ ನೀವು ಕೆಳಗೆ ತಿಳಿಸಿದಂತೆ ಮಾಡಿದಾಗ ವಾಟ್ಸ್‌ಆ್ಯಪ್ ನಿಮ್ಮ ವಿವರಗಳನ್ನು ಫೇಸ್‌ಬುಕ್ನೊಂದಿಗೆ ಶೇರ್ ಮಾಡುವುದಿಲ್ಲ. ನೀವು ಆ್ಯಪ್ ತೆರೆದಾಗ ಮೇಲೆ ಹೇಳಿದಂತೆ ನಿಮಗೆ ನಿಮ್ಮ ಸ್ಕ್ರೀನ್ ನಲ್ಲಿ ಕಾಣಿಸುತ್ತದೆ. ಆಗನೀವು ಮಾಡಬೇಕಾದ್ದದ್ದಿಷ್ಟೆ :
1. ರೀಡ್ ಎಂದಿರುವೆಡೆ ಟ್ಯಾಪ್ ಮಾಡಿ.
2. ಶೇರ್ ಮೈ ವಾಟ್ಸ್‌ಆ್ಯಪ್ ಅಕೌಂಟ್ ಇನ್ಫೊರ್ಮೇಶನ್ ವಿದ್ ಫೇಸ್‌ಬುಕ್ ಅನ್ ಚೆಕ್ ಮಾಡಿ.
ಒಂದು ವೇಳೆ ನೀವು ಎಗ್ರೀ ಅಂತ ಟ್ಯಾಪ್ ಮಾಡಿದ್ದರೆ ಅಥವಾ ಓದದೆಯೇ ಹಾಗೆ ಮಾಡಿದ್ದರೆ ಆಗ ಕೂಡ ನೀವು ಕೆಳಗೆ ತಿಳಿಸಿದಂತೆ ಮಾಡಿ ವಾಟ್ಸ್‌ಆ್ಯಪ್ ನಿಮ್ಮ ಮಾಹಿತಿಯನ್ನು ಫೇಸ್‌ಬುಕ್ನೊಂದಿಗೆ ಶೇರ್ ಮಾಡದಂತೆ ಮಾಡಬಹುದು.
If you are on iPhone:
Tap Settings > Account.
Uncheck Share my account info.
These steps will work on Android:
Tap the three dots icon on the top-right.
Tap Settings > Account.
Uncheck Share my account info.