ಮಲಯಾಳಂ ಸಾಹಿತಿ ಪುನಾತಿಲ್ ಕುಂಜಾಬ್ದುಲ್ಲಾ ನಿಧನ
ಕೋಝಿಕೋಡ್ , ಅ.27: ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಹಿರಿಯ ಮಲಯಾಳಂ ಸಾಹಿತಿ ಪುನಾತಿಲ್ ಕುಂಜಾಬ್ದುಲ್ಲಾ (77) ಶುಕ್ರವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ವೃತ್ತಿಯಿಂದ ವೈದ್ಯರಾಗಿದ್ದ ಕುಂಜಾಬ್ದುಲ್ಲಾ ಸಾಹಿತ್ಯ ಕ್ಷೇತ್ರದಲ್ಲಿ ಮಹಾನ್ ಸಾಧಕರಾಗಿದ್ದಾರೆ. ಅವರ ಕಾದಂಬರಿ ‘ಸ್ಮಾರಕಾಸಿಲಕ್ಕಲ್’ (ಸ್ಮಾರಕ ಶಿಲೆಗಳು)ಗೆ 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಒಲಿದು ಬಂದಿತ್ತು. ಅದೇ ಕಾದಂಬರಿ ಗೆ 1978ರಲ್ಲಿ ಮತ್ತು ‘ಮಲಮುಕುಲೈ ಅಬ್ದುಲ್ಲಾ’ ಕೃತಿಗೆ 1980ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.
ಮಲಯಾಳಂ ಸಾಹಿತ್ಯದಲ್ಲಿ ಆಧುನಿಕತಾವಾದದ ಪ್ರತಿನಿಧಿಗಳೆಂದು ಗುರುತಿಸಲ್ಪಟ್ಟಿರುವ ಕುಂಜಾಬ್ದುಲ್ಲಾ ಅವರ ಮರುವೂ, ಕನ್ಯಾವಣಂಗಲ್, ಕಾಥಿ ಮತ್ತು ಅಲಿಗಢ ಕಥಕ್ಕಲ್ ಇತರ ಪ್ರಮುಖ ಕೃತಿಗಳು.
ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಕುಂಜಾಬ್ದುಲ್ಲಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story