ಲಂಡನ್ನಲ್ಲಿರುವ ರವೀಂದ್ರನಾಥ್ ಠಾಗೂರ್ ಮನೆ ಖರೀದಿಗೆ ಮಮತಾ ಬ್ಯಾನರ್ಜಿ ಆಸಕ್ತಿ
ಹೊಸದಿಲ್ಲಿ, ನ. 13: ನೋಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರ ನಾಥ್ ಠಾಗೂರರ ಉತ್ತರ ಲಂಡನ್ನ ಹ್ಯಾಮ್ಸ್ಟೆಡ್ ಹೀಥ್ನಲ್ಲಿರು ಹೀಥ್ ವಿಲ್ಲಾ ಅನ್ನು ಖರೀದಿಸಿಲು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಆಸಕ್ತಿ ವಹಿಸಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.
ಬ್ರಿಟನ್ನಲ್ಲಿರುವ ಭಾರತೀಯ ಪ್ರಭಾರಿ ಹೈಕಮಿಷನರ್ ದಿನೇಶ್ ಪಟ್ನಾಯಕ್ ಅವರನ್ನು ಭೇಟಿ ಆಗಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಲಂಡನ್ನಲ್ಲಿ 1 ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಲಂಡನ್ನಲ್ಲಿರುವ ಠಾಗೂರರ ಮನೆ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಮನೆಯ ವೌಲ್ಯ 2.7 ದಶಲಕ್ಷ ಪೌಂಡ್. 1913ರಲ್ಲಿ ನೋಬೆಲ್ ಪ್ರಶಸ್ತಿಗೆ ಪಾತ್ರವಾದ ಗೀತಾಂಜಲಿಯನ್ನು ಇದೇ ಮನೆಯಲ್ಲಿ ಕುಳಿತು ಠಾಗೂರರು ಬರೆದಿದ್ದರು. ಈ ನಡುವೆ ಬ್ರಿಟನ್ನ ವಿಂಬೆಲ್ಡನ್ನಲ್ಲಿರುವ ಸಿಸ್ಟರ್ ನಿವೇದಿತಾ ಮನೆಗೆ ಪಾರಂಪರಿಕ ಸ್ಥಾನ ನೀಡಲಾಗಿದೆ. ಈ ಬಗ್ಗೆ ರವಿವಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಮುಖ್ಯ ಅತಿಥಿಯಾಗಿದ್ದರು.
Next Story