ಪಂಚ ರಾಜ್ಯ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ !
ಹೊಸದಿಲ್ಲಿ, ಡಿ.11: ಐದು ರಾಜ್ಯ ಗಳಲ್ಲಿ ನಡೆದಿರುವ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ ಆರಂಭಗೊಂಡಿದ್ದು, ಕೇಂದ್ರದ ಆಡಳಿತಾರೂಢ ಬಿಜೆಪಿ ಮೂರು ರಾಜ್ಯ ಗಳಲ್ಲಿ ಹಿನ್ನಡೆ ಅನುಭವಿಸಿದೆ.
ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 66 ಮತ್ತು ಬಿಜೆಪಿ 60, ರಾಜಸ್ಥಾನ ಕಾಂಗ್ರೆಸ್ 77 ಮತ್ತು ಬಿಜೆಪಿ 55, ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 33 ಮತ್ತು ಬಿಜೆಪಿ 28, ಮಿಜೋರಾಂ ನಲ್ಲಿ ಕಾಂಗ್ರೆಸ್ 9 ರಲ್ಲಿ ಮುನ್ನಡೆ ಸಾಧಿಸಿದೆ.
ರಾಜಸ್ಥಾನ ದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಂಡು ಬಂದಿದೆ.
ರಾಜನಂದಗಾವ್ ಕ್ಷೇತ್ರದಲ್ಲಿ ಛತ್ತೀಸ್ ಗಡದ ಹಾಲಿ ಮುಖ್ಯ ಮಂತ್ರಿ ಡಾ.ರಮಣ್ ಸಿಂಗ್ ಹಿನ್ನಡೆ ಅನುಭವಿಸಿದ್ದಾರೆ.ಕಾಂಗ್ರೆಸ್ ನ ಕರಣಾ ಶುಕ್ಲಾ ಭಾರಿ ಮುನ್ನಡೆ ಸಾಧಿಸಿದ್ದಾರೆ. ರಮಣ್ ಸಿಂಗ್ ಸತತ ಮೂರು ಬಾರಿ ಸಿಎಂ ಆಗಿದ್ದರು.
Next Story