Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸರ್ಪದ ಹೆಡೆಯಡಿಯಲ್ಲಿನ ಬದುಕು

ಸರ್ಪದ ಹೆಡೆಯಡಿಯಲ್ಲಿನ ಬದುಕು

ಕುದಿ-ಎಸರು -ಡಾ. ವಿಜಯಮ್ಮ

ತಾರಾ ಭಟ್, ಉಡುಪಿತಾರಾ ಭಟ್, ಉಡುಪಿ1 July 2017 9:37 PM IST
share
ಸರ್ಪದ ಹೆಡೆಯಡಿಯಲ್ಲಿನ ಬದುಕು

‘ಕುದಿ ಎಸರು’ ಡಾ. ವಿಜಯಮ್ಮ ಅವರ 362 ಪುಟದ ಬೃಹತ್ ಆತ್ಮಕತೆಯ ಮೊದಲ ಭಾಗ, ಶೀರ್ಷಿಕೆಯೇ ಸೂಚಿಸುವಂತೆ ಭೂತಕಾಲದ ನೆನಪು ಕುದಿದು ಮಡುವು ಗಟ್ಟಿದಂತೆ ಭಯ, ಆತಂಕ, ಅವಮಾನ, ವಿಹ್ವಲತೆಗಳ ನಡುವೆಯೇ ಅದನ್ನು ಮೀರಿ ಒಂದೊಂದೇ ಮೆಟ್ಟಲುಗಳನ್ನೇರುತ್ತಾ ಯಶಸ್ವಿನ ಸಾಧನೆಗಳನ್ನು ವಿಸ್ತರಿಸಿದ ಕಥಾನಕ ವರ್ತಮಾನದಲ್ಲಿದ್ದು ಎರಡು ತಲೆಮಾರಿನಷ್ಟು ಹಳೆಯ ನೆನಪುಗಳನ್ನು ಸಂಕಷ್ಟಕ್ಕೆ ಒಡ್ಡುವುದು ಸುಲಭದ ಮಾತಲ್ಲ. ಅದೊಂದು ಅಗ್ನಿಪರೀಕ್ಷೆ.

ಮರಾಠಿಯಲ್ಲಿ ಮಹಿಳೆಯರ ಆತ್ಮಕಥೆಗಳ ಪರಂಪರೆಯೇ ಇದೆ. ಇಂತಹ ಆತ್ಮಕಥನಗಳು ಮಹಿಳೆಯರ ಬಿಕ್ಕಟ್ಟಿನ ಮನಸ್ಥಿತಿಯ ಎಲ್ಲಾ ಬಗೆಯ ಸಾಮಾಜಿಕ ಕಟ್ಟು ಕಟ್ಟಲೆಯನ್ನು ಧಿಕ್ಕರಿಸುವ ಅಂತರಂಗದ ದನಿಗಳಾಗಿ ಮಹಾರಾಷ್ಟ್ರದಲ್ಲೇ ಬಹಳಷ್ಟು ಚರ್ಚೆಗೆ ಕಾರಣಗಳಾಗಿವೆ.

ಆತ್ಮಕಥೆ ಎನ್ನುವಾಗ ತಮ್ಮನ್ನೇ ವೈಭವೀಕರಿಸುವ ಚಾಳಿನಿಂದ ದೂರ ಸರಿದು ಯಾವ ಪೂರ್ವಾಗ್ರಹವೂ ಇಲ್ಲದೇ ಯಾವುದು ಸತ್ಯವೋ ಅದಕ್ಕೆ ಬದ್ಧರಾಗಿರುವ ಬರವಣಿಗೆ .ಅದಕ್ಕೆ ಎಲ್ಲವನ್ನು ಭೇದಿಸುವ ಅಸಾಧ್ಯ ಶಕ್ತಿ ಬೇಕಾಗುತ್ತದೆ. ಡಾ.ವಿಜಯಮ್ಮ ಅವರ ನಿರ್ಭಿಡೆಯ ಬರವಣಿಗೆಯಲ್ಲಿ ತಮ್ಮ ಕತೆ ಹೇಳುವ ವರಾಗಿಯೂ ಅದಕ್ಕೆ ವಸ್ತುವಾದರು. ಅದು ಸ್ವಂತ ಅನುಭವದಿಂದ ಪಾಕ ಗೊಂಡಿದೆ. ಸೋಗಿನ ವೈಚಾರಿಕತೆಯನ್ನು ನಿರಾಕರಿಸುವ ಅನುಭವದ ಈ ಕತಾನಕ ಪುರುಷ ಪ್ರಾಧಾನ್ಯತೆಯ ಅಹಂನಿಂದ ಮಹಿಳೆಯರು ಅನುಭವಿಸುವ ಸಂಕಷ್ಟಗಳನ್ನು ನಿರ್ವಿಕಾರವಾಗಿ ದಾಖಲಿಸುತ್ತದೆ. ಈ ಆತ್ಮಕತೆ ಕೇವಲ ಅನುಭವಗಳ ಚಿತ್ರಣ ಮಾತ್ರವಾಗಿರದೇ ಅದರಾಚೆಗಿನ ವಾಸ್ತವ ವನ್ನು ಪ್ರಶ್ನಿಸುತ್ತದೆ, ಕಾರಣಗಳನ್ನು ಹುಡುಕಲು ಪ್ರಯತ್ನಿಸು ತ್ತದೆ. ಸರ್ಪದ ಅಡಿಯ ಬದುಕು ಅಂದರೆ ಅಪಾಯದ ಭಯ ದಲ್ಲೇ ಇರುವ ಬದುಕು, ಆದರೆ ಇಲ್ಲಿ ಹಾವನ್ನು ಸದೆಬಡಿದು ಮುಕ್ತವಾಗುವುದು ಅಲ್ಲ, ಹಾವಿನ ಭಯದ ನೆರಳನ್ನು ಕಳ ಕೊಂದು ಆತ್ಮ ಸ್ಥೈರ್ಯ ಬೆಳೆಸಿಕೊಂಡು ಮುನ್ನಡೆಯುವುದು.

ಈ ಕೃತಿಯ ಪ್ರಾರಂಭದಲ್ಲೇ ಎರಡು ಮಕ್ಕಳ ತಾಯಿ ಯಾದ ತನ್ನನ್ನು ತ್ಯಜಿಸಿಹೋದ ಗಂಡನು ಒಮ್ಮೆ ರಸ್ತೆಯಲ್ಲಿ ಸಂಧಿಸಿದಾಗ ನಡುರಸ್ತೆಯಲ್ಲೇ ಅವಳ ಕೂದಲನ್ನು ಹಿಡಿದು ಬೀಳಿಸಿ ಎಳೆದಾಡಿ ಬೂಟುಗಾಲಿನಿಂದಲೇ ಒದ್ದು ರಸ್ತೆಯಲ್ಲಿ ಹೊರಳಾಡಿಸಿ ಗಾಂಧಿಬಝಾರಿನ ಟ್ಯಾಕ್ಸಿಸ್ಟಾಂಡ್‌ನಿಂದ ಕೃಷ್ಣ ರಾವ್ ಪಾರ್ಕ್‌ವರೆಗೆ ಉರುಳಾಡಿಸಿ ಹೋದ ಪ್ರಸಂಗವನ್ನು ಓದುವಾಗ ಯಾಕೆ ನಮ್ಮ ಜನರಿಗೆ ಸಿಟ್ಟು ಬರುವುದಿಲ್ಲ ಎಂಬ ಪ್ರಶ್ನೆ ಬರುತ್ತದೆ.

ಕುಟುಂಬದ ಪ್ರತಿಷ್ಠೆ ಮುಂದೆ ಮಹಿಳೆಯರ ಮೇಲೆ ನಡೆಯುವ ಹಿಂಸೆ ದೌರ್ಜನ್ಯ ಮುಖ್ಯವಾಗುವುದೇ ಇಲ್ಲ.

1942ರಲ್ಲಿ ತೆಲುಗು ಮಾತನಾಡುವ ವೈದಿಕಪರಂಪರೆಯ ಬ್ರಾಹ್ಮಣ ಕುಟುಂಬದಲ್ಲಿ ದಾವಣಗೆರೆ ಯಲ್ಲಿ ಜನ್ಮತಾಳಿದಾಗ ಆಗಿನ ಸ್ಥಿತಿ ಗತಿ ಹೇಗಿತ್ತು ಎನ್ನುವುದನ್ನು ಅವರು ದಾಖಲಿಸುತ್ತಾರೆ. ವೈದಿಕ ಪರಂಪರೆಯಲ್ಲಿನ ಮಡಿವಂತಿಕೆ, ಕಟ್ಟು ಕಟ್ಟಳೆ ಅಮಾನವೀಯವಾಗಿ ನಡೆಸಿಕೊಳ್ಳುವ ಬಗ್ಗೆಯೂ ಮಾರ್ಮಿಕವಾಗಿ ಉಲ್ಲೇಖಿಸುತ್ತಾರೆ. ಇವರ ತಾಯಿ ಪ್ರಸವವೇದನೆಯಲ್ಲಿರುವಾಗ ಮನೆಗೆ ಹೊರಗಿನಿಂದ ಬೀಗ ಜಡಿದು ಹೋದ ಬೇಜವಾದ್ದಾರಿ ತಂದೆಯ ಕ್ರೌರ್ಯ ಎಂತಹದ್ದು ಎಂದು ಬೆಚ್ಚಿ ಬೀಳುವಂತೆ ಮಾಡುತ್ತದೆ.ಆ ಕಾಲದಲ್ಲಿ ಗಂಡ ನಾದವನು ಹೆಂಡತಿ ಮೇಲೆ ಏನೇ ದೌರ್ಜನ್ಯ ಮಾಡಲು ಸರ್ವಸ್ವತಂತ್ರನು.

ನಮ್ಮದೇ ಪರಿಚಯದವರು ಗಂಡನು ಊಟಕ್ಕೆ ಬರಲು ತಡವಾದ್ದರಿಂದ ಹಸಿವಾಯಿತೆಂದು ಹೆಂಡತಿ ಗಂಡನಿಗೆ ಬಡಿಸುವ ಮೊದಲು ಊಟ ಮಾಡಿದಳೆಂದು ಬಾಯಿಗೆ ಕೈ ಹಾಕಿ ಕಾರುವಂತೆ ಮಾಡಿದ್ದು ಇದೆಲ್ಲ ಸಾಮಾನ್ಯ ಸಂಗತಿ ಯಾಗಿ ಹೆಂಡತಿಯೇ ಆರೋಪಿಯ ಸ್ಥಾನದಲ್ಲಿರುತ್ತಾಳೆ.

ಪೋಷಕರ ಪ್ರೀತಿಯೂ ಇಲ್ಲದೇ ಬೆಳೆದು ಚಿಕ್ಕ ವಯಸ್ಸಿ ನಲ್ಲೇ ಮದುವೆಯಾಗಿ ಗಂಡನ ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ ಎಲ್ಲವನ್ನೂ ಆತ್ಮ ಕಥನ ಅತ್ಯಂತ ಆರ್ದ್ರವಾಗಿ ಸೆರೆಹಿಡಿಯುತ್ತದೆ. ಇಷ್ಟೆಲ್ಲ ಯಾತನೆ ಅನುಭವಿಸಿದರೂ ಅದರೊಳಗೆ ಇದ್ದ ಚೈತನ್ಯದ ಚಿಲುಮೆ ಮಾತ್ರ ಬತ್ತಿ ಹೋಗಿರಲಿಲ್ಲ. ಇಬ್ಬರು ಗಂಡು ಮಕ್ಕಳ ತಾಯಿ ಆಗಿಯೂ ತಮ್ಮ ಅಂತರಂಗದ ನಿರಾಸೆಯನ್ನು ಒಂದು ಕ್ರಿಯಾತ್ಮಕ ಬದುಕಿಗೆ ಪರಿವರ್ತಿಸಿಕೊಂಡಿದ್ದು ಮತ್ತು ಅದಕ್ಕಾಗಿ ಅವರು ನಡೆಸಿದ ಹೋರಾಟ ಬೇರೆಯವರಿಗೆ ಸ್ಫೂರ್ತಿ ಕೊಡುವ ಯಶೋಗಾಥೆಯೂ ಹೌದು.

ಅರ್ಧದಲ್ಲಿ ಮುಗಿಸಿದ್ದ ಶಿಕ್ಷಣವನ್ನು ‘ಆಚಾರ್ಯ ಪಾಠಶಾಲೆ’ ಸಂಜೆ ಕಾಲೇಜ್‌ಗೆ ಸೇರಿ ಕನ್ನಡದಲ್ಲಿ ಎಂ.ಎ ಮಾಡಿ ನಂತರ ಕಲಿಯುವ ಛಲದಿಂದ ಶ್ರೀರಂಗರ ನಾಟಕಗಳ ಕುರಿತು ಸಂಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನೂ ಪಡೆದರು.

ಗಂಡ ತಾನಾಗಿ ಇವರನ್ನು ತ್ಯಜಿಸಿ ಹೋದಾಗ ಒಂದು ರೀತಿಯ ಬಿಡುಗಡೆ ದೊರೆತರೂ ಸಾರ್ವಜ ನಿಕವಾಗಿ ಉತ್ಸಾಹ ಕಾಯ್ದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ, ಆದರೆ ಈ ಸಮಯದಲ್ಲಿ ಅವರ ತಂದೆ ಅವರ ಪರವಾಗಿ ನಿಂತು ನೈತಿಕ ಬಲ ತುಂಬಿದ್ದು ಒಳಗಿದ್ದ ತುಡಿತ ಕ್ರಿಯಾಶಕ್ತಿ ಹೊರ ಹೊಮ್ಮಲು ಕಾರಣವಾಯಿತು. ಪತ್ರಿಕೋದ್ಯಮ ದಲ್ಲಿದ್ದ ಕಾರಣ ಅನೇಕರ ಸಹಕಾರಬೇಕಾದ ರೀತಿ ಯಲ್ಲಿ ಬರವಣಿಗೆ ಮಾಡಲು ಸ್ವಾತಂತ್ರ ಪ್ರೋತ್ಸಾಹ ದಿಂದಾಗಿ ಪತ್ರಕರ್ತೆಯಾಗಿ ಪ್ರಜಾಮತ ಸಾಪ್ತಾಹಿಕ ದಲ್ಲಿ, ಮಲ್ಲಿಗೆ ಮಾಸ ಪತ್ರಿಕೆಯ ಸಹ ಸಂಪಾದಕಿ, ತುಷಾರ ಮಾಸಪತ್ರಿಕೆಯ ಸಹ ಸಂಪಾದಕಿ, ಉದಯ ವಾಣಿ ದೈನಿಕದ ಅಂಕಣಕಾರ್ತಿ ಹೀಗೆ ಬೆಳೆಯುತ್ತಾ ಇಪ್ಪತ್ತಕ್ಕೂ ಹೆಚ್ಚಿನ ಸ್ವಂತ ಕೃತಿಗಳ ರಚನೆ, ಇನ್ನೆಷ್ಟೋ ಸಂಪಾದಿತ ಕೃತಿಗಳು, 15ಕ್ಕಿಂತ ಹೆಚ್ಚಿನ ಪ್ರಶಸ್ತಿಗಳು ಮತ್ತು ಅವರ ಬೇರೆ ಬೇರೆ ಚಟುವಟಿಕೆಗಳ ಬಗ್ಗೆ ವಿವರಿಸುವಾಗ ವಿಸ್ಮಯವಾಗುತ್ತದೆ. ಶೂನ್ಯದಿಂದ ಸ್ವಾವಲಂಬಿಯಾಗಿ ಬೆಳೆದ ರೀತಿ, ಪತ್ರಿಕೋದ್ಯಮದಲ್ಲಿದ್ದ ಕಾರಣವೇ ತನ್ನನ್ನು ತಾನು ಶೋಧಿಸಿಕೊಳ್ಳಲು ಕಾರಣವಾಯಿತೆಂದು ಅವರು ಭಾವಿಸುತ್ತಾರೆ. ಅವರೇ ಹೇಳಿಕೊಂಡಿದ್ದಾರೆ. ‘ಈ ಆತ್ಮಕಥಾನಕದ ಆಶಯವು ಅನುಭವದ ಅಗ್ನಿ ಪರೀಕ್ಷೆಯಲ್ಲಿ ಮುಂದುವರಿ ಯುವುದು, ಸದಾ ಒಳ್ಳೆಯದಕ್ಕಾಗಿ ತುಡಿಯುವ ಶಕ್ಕಿ ಕೊಟ್ಟದ್ದು ನನ್ನ ಬಳಿ ಜೋಪಾನವಾಗಿಟ್ಟುಕೊಂಡಿದ್ದು ಪ್ರೀತಿ ವಾತ್ಸಲ್ಯದ ಜೋಳಿಗೆ, ಅದನ್ನು ನನಗೆ ತುಂಬಿ ಕೊಟ್ಟವರು ನನ್ನ ಮಕ್ಕಳು, ಅದೇ ನನ್ನ ಬಂಡವಾಳ ಅಂದು-ಇಂದೂ ಮುಂದಿನ ಕಥಾನಕ ಜೀವನಗಳತ್ತ ನಡೆಯುತ್ತಾ’

‘ಕುದಿಸಿದರು’ ಮುಖ್ಯವಾಗುವುದು ಅದು ಗತಕಾಲ ಕಟ್ಟಿಕೊಡು ವುದರಿಂದ.

ನಾನು ಓದಿದ ಪುಸ್ತಕ

share
ತಾರಾ ಭಟ್, ಉಡುಪಿ
ತಾರಾ ಭಟ್, ಉಡುಪಿ
Next Story
X