ಮಾಡಬೇಕಾದ ಕೆಲಸಗಳು ಮರೆತು ಹೋಗದಿರಲು ಹೀಗೆ ಮಾಡಿ
ಮಾನಸಿಕ ಸೂಚನೆಗಳನ್ನು ಆಧರಿಸಿದ ರಿಮೈಂಡರ್‌ಗಳು (ನೆನಪು) ಅಗ್ಗದ ಬೆಲೆಯಲ್ಲಿ, ಕಡಿಮೆ ಕಾರ್ಯಯೋಜನೆಯಲ್ಲಿ ವಿವಿಧ ಕೆಲಸಗಳನ್ನು ನಿತ್ಯವೂ ಮುಗಿಸಲು ಜನರಿಗೆ ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ವಿದ್ಯುತ್ ಶುಲ್ಕ ಕಟ್ಟುವುದು ಅಥವಾ ಬಟ್ಟೆಯನ್ನು ಡ್ರೈಯರ್‌ನಿಂದ ತೆಗೆಯುವುದೇ ಇರಬಹುದು. ನಿತ್ಯವೂ ಹಲವು ಕೆಲಸಗಳನ್ನು ಮಾಡುವುದನ್ನು ಹಲವರು ಮರೆಯುತ್ತಾರೆ. ಮಾಡಬೇಕೆಂದುಕೊಳ್ಳುತ್ತಾರಾದರೂ ಅವರಿಗೆ ನೆನಪಾಗುವುದಿಲ್ಲ. ಈಗ ಸಂಶೋಧಕರು ಹೇಳಿರುವ ಪ್ರಕಾರ ಈ ಕೆಲಸಗಳನ್ನು ಸಂಬಂಧಿಸಿದ ಸೂಚನೆಗಳ ಜೊತೆಗೆ ತಳಕು ಹಾಕುವ ಮೂಲಕ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಕೆಲಸ ಮಾಡಲು ನೆನಪಾಗುತ್ತದೆ.
ಸರಿಯಾದ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಸಿಗುವ ಸೂಚನೆಯು ಜನರಿಗೆ ತಮ್ಮ ಕೆಲಸವನ್ನು ನೆನಪಿಸಿಕೊಂಡು ಮುಗಿಸಲು ನೆರವಾಗುತಗ್ತದೆ ಎಂದು ಹಾರ್ವರ್ಡ್ ಕೆನಡಿ ಶಾಲೆಯ ಮನಶ್ಶಾಸ್ತ್ರಜ್ಞ ಟಾಡ್ ರಾಜರ್ಸ್ ಹೇಳಿದ್ದಾರೆ. ಪೆನಿಸಿಲ್ವಾನಿಯದ ವಾರ್ಟನ್ ವಿಶ್ವವಿದ್ಯಾಲಯದ ರಾಜರ್ಸ್ ಮತ್ತು ಸಹ ಲೇಖಕರಾದ ಕ್ಯಾಥರೀನ್ ಮಿಲ್ಕ್ ಮ್ಯಾನ್ ಈ ಸಿದ್ಧಾಂತವನ್ನು ಮುಂದಿಟ್ಟಿದ್ದಾರೆ. ಕೆಲಸದ ಜೊತೆಗೂಡಿದ ರಿಮೈಂಡರುಗಳು ಕೆಲಸವನ್ನು ನೆನಪಿಸುವ ಸಾಧನಗಳಾಗಲಿವೆ.
ಈ ಸೂಚನೆ ಆಧಾರಿತ ರಿಮೈಂಡರುಗಳಿಗೆ ಯಾವುದೇ ತಂತ್ರಜ್ಞಾನದ ಅಗತ್ಯವಿಲ್ಲ. ಅದಕ್ಕೆ ಮಾನವನ ಮಿದುಳು ಸಾಕು. ಮಿದುಳು ನಮಗೆ ಬೇಕಾದಾಗಲೇ ಅದನ್ನು ಕೊಡುತ್ತದೆ. ಕಾಫಿ ಮಳಿಗೆಯೊಂದರಲ್ಲಿ ಗ್ರಾಹಕರಿಂದ ಸಂಗ್ರಹಿಸಿರುವ ವಿವರಗಳನ್ನು ಆಧರಿಸಿ ಈ ಅಧ್ಯಯನ ಮಾಡಲಾಗಿದೆ. ಉದ್ಯಮದ ದಿನವೊಂದರಲ್ಲಿ 500 ಗ್ರಾಹಕರಿಗೆ ಕೂಪನನ್ನು ಕೊಡಲಾಯಿತು. ಅದು ಎರಡು ದಿನದ ನಂತರ ಕಾಫಿ ಮಳಿಗೆಯಲ್ಲಿ ಮಾನ್ಯತೆ ಹೊಂದಿತ್ತು. ಕೇವಲ ಕೆಲವೇ ಗ್ರಾಹಕರಿಗೆ ನಿಮ್ಮ ಪಕ್ಕ ಕುಳಿತ ಬೇರೆ ಗ್ರಹದ ಜೀವಿಯೊಬ್ಬರು ಈ ಕೂಪನ್ ಬಳಸಿಕೊಳ್ಳುವಂತೆ ನಿಮಗೆ ನೆನಪಿಸುತ್ತಾರೆ ಎಂದು ಹೇಳಲಾಗಿತ್ತು. ಇಂತಹ ಸೂಚನೆಯನ್ನು ಕೊಟ್ಟ ಸುಮಾರು ಶೇ 24ರಷ್ಟು ಗ್ರಾಹಕರು ತಮ್ಮ ಕೂಪನ್ ಬಳಸಲು ನೆನಪಿಸಿಕೊಂಡರು. ಆದರೆ ಸೂಚನೆ ನೀಡದವರಲ್ಲಿ ಶೇ. 17 ಮಂದಿ ಮಾತ್ರ ಕೂಪನ್ ಬಳಸಿದ್ದಾರೆ. ಅಂದರೆ ಕೂಪನ್ ಬಳಕೆಯಲ್ಲಿ ಶೇ 40ರಷ್ಟು ಏರಿಕೆ ಕಂಡಿದೆ.
ರೋಜರ್ಸ್ ಮತ್ತು ಮಿಲ್ಕ್ ಮ್ಯಾನ್ ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಬಯಸಿದ್ದಾರೆ. ವೈದ್ಯಕೀಯ ಮತ್ತು ಆರೋಗ್ಯ ಆಧಾರಿತ ನೆನಪುಗಳಿಗೂ ಇದನ್ನು ಬಳಸಬಹುದೇ ಎಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಕೃಪೆ: http://indianexpress.com/