ಯುಜಿಸಿ ನಿಯಮ ಬದಲು: ಸ್ವಾಯತ್ತ ವಿವಿಗಳ ಹತ್ತು ಸೂತ್ರಗಳು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ಹಾಲಿ ಇರುವ ಸ್ವಾಯತ್ತ ವಿಶ್ವವಿದ್ಯಾನಿಲಯಗಳ ಮತ್ತು ಸ್ವಾಯತ್ತವಾಗಲು ಮುಂದಾಗಿರುವ ಸಂಸ್ಥೆಗಳ ನಿಬಂಧನೆಗಳಿಗೆ ಹಲವು ತಿದ್ದುಪಡಿ ತಂದಿವೆ. ಇನ್ನು ಮುಂದೆ ವಿಶ್ವವಿದ್ಯಾನಿಲಯಗಳು ಯುಜಿಸಿ ನಿಬಂಧನೆಗಳು- 2016ನ್ನು ಪಾಲಿಸಬೇಕಾಗುತ್ತದೆ. ಅದರ ಪ್ರಮುಖ ಹತ್ತು ಅಂಶಗಳು ಇಲ್ಲಿವೆ.
1-ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳು ಎಂಬ ಪರಿಕಲ್ಪನೆಯಡಿ, ಅಪೇಕ್ಷಿತ ಪತ್ರ (ಲೆಟರ್ ಆಫ್ ಇಂಡೆಂಟ್) ಎಂಬ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಈ ಪತ್ರ ಸ್ವೀಕರಿಸಿದ ಬಳಿಕ, ಅರ್ಜಿದಾರ ಒಂದು ಸಂಸ್ಥೆಯನ್ನು ಕಟ್ಟಲು ಮತ್ತು ಕಾರ್ಯಾರಂಭ ಮಾಡಲು ಅನುಮತಿ ಸಿಗುತ್ತದೆ. ಎಲ್‌ಒಐ ಪಡೆದ ಮೂರು ವರ್ಷಗಳ ಒಳಗಾಗಿ ಕಾರ್ಯಾರಂಭ ಮಾಡಬೇಕು.
2-ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳಿಗೆ ವಿಷಯನಿಷ್ಠತೆಯನ್ನು ಕಿತ್ತುಹಾಕಲಾಗಿದೆ. ಹಿಂದಿನ ನಿಯಮಾವಳಿಯಲ್ಲಿ, ವಿಷಯನಿಷ್ಠ ಪರಿಭಾಷೆ ಇದ್ದ ಹಿನ್ನೆಲೆಯಲ್ಲಿ ಅದನ್ನು ವಿಭಿನ್ನ ವಿಧಗಳಲ್ಲಿ ವಿಶ್ಲೇಷಿಸಲು ಅವಕಾಶ ಇತ್ತು.
3-ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳ ಭೂಮಿಯ ಅಗತ್ಯತೆಯ ಬದಲಾಗಿ, ಕಟ್ಟಡ ನಿರ್ಮಿತ ಪ್ರದೇಶವನ್ನು ನಿರ್ದಿಷ್ಟಪಡಿಸಲಾಗಿದೆ. ಹಿಂದೆ ಇದ್ದ ಭೂ ಅಗತ್ಯತೆ ನಿಬಂಧನೆ ಅನ್ವಯ, ಕ್ಯಾಂಪಸ್ ಅಭಿವೃದ್ಧಿಪಡಿಸಲು 10 ಎಕರೆ ಭೂಮಿ, ಏಳು ಎಕರೆ ಭೂಮಿ ಹಾಗೂ ಐದು ಎಕರೆ ಭೂಮಿಯನ್ನು ಕಡ್ಡಾಯ ಮಾಡಲಾಗಿತ್ತು. ಇದೀಗ ಹೊಸ ಕ್ಯಾಂಪಸ್‌ಗಳು ಶೇಕಡ 40ರಷ್ಟು ಮುಕ್ತ ಪ್ರದೇಶಗಳನ್ನು ಹೊಂದಿರಬೇಕಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗಸೂಚಿ ಅನ್ವಯ, ಆಡಳಿತಾತ್ಮಕ ಬ್ಲಾಕ್‌ನ ಕಟ್ಟಡ 15 ಸಾವಿರ ಚದರ ಮೀಟರ್ ಇರಬೇಕು. ಇದರ ಜತೆಗೆ ಪ್ರತಿ ವಿದ್ಯಾರ್ಥಿಗೆ ಇರುವ ಜಾಗ ಎಂಬ ಪರಿಕಲ್ಪನೆಯನ್ನು ಆರಂಭಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಪ್ರತಿ ವಿದ್ಯಾರ್ಥಿಗೆ ಕನಿಷ್ಠ 10 ಚದರ ಮೀಟರ್ ಜಾಲ ಹೊಂದಿರಬೇಕು ಎಂದು ನಿಗದಿಪಡಿಸಲಾಗಿದೆ.
4-ಅಗತ್ಯ ಮೂಲಸೌಕರ್ಯ ಹಾಗೂ ಕ್ಯಾಂಪಸ್‌ಗೆ ಮಾನದಂಡಗಳನ್ನು ವ್ಯಾಖ್ಯಾನಿಸಲಾಗಿದೆ.
ವಿಶ್ವವಿದ್ಯಾನಿಲಯಗಳು ಈ ಮೇಲಿನ ಎರಡು ಮಾನದಂಡಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ಹಾಲಿ ಗ್ರೇಡಿಂಗ್ ಕಡ್ಡಾಯವಾಗಿ ನ್ಯಾಕ್ ಎ ಆಗಿರುವುದು ಮಾತ್ರವಲ್ಲದೇ, ಹಿಂದಿನ ವರ್ಷ ಕೂಡಾ ನ್ಯಾಕ್ ಎ ಗ್ರೇಡ್ ಹೊಂದಿರಬೇಕು. ಸ್ವಾಯತ್ತ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬಂದ ಐದು ವರ್ಷಗಳ ಬಳಿಕವಷ್ಟೇ ಕ್ಯಾಂಪಸ್‌ಗಳನ್ನು ಆರಂಭಿಸಬಹುದು.
5-ಗುಣಮಟ್ಟವನ್ನು ಖಾತ್ರಿಪಡಿಸುವ ಸಲುವಾಗಿ, ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳು, ನ್ಯಾಕ್ ಎ ಗ್ರೇಡಿಂಗನ್ನು ಸತತ ಮೂರು ವರ್ಷಗಳ ಕಾಲ ಪಡೆದಿರಬೇಕು. ಒಆರ್‌ಟಿಒಗಳು ಗುಣಮಟ್ಟ, ಅರ್ಜಿ ಸಲ್ಲಿಸುವ ಅವಧಿಯಲ್ಲಿ ಹಾಗೂ ಹಿಂದಿನ ವರ್ಷಗಳಲ್ಲಿ ಗರಿಷ್ಠ ನ್ಯಾಕ್ ಶ್ರೇಣಿ ಹೊಂದಿರುವುದನ್ನು ಖಾತ್ರಿಪಡಿಸಬೇಕಾಗುತ್ತದೆ. ಇದರ ಜತೆಗೆ ಅರ್ಜಿದಾರ ಸಂಸ್ಥೆ, ಅರ್ಜಿ ಸಲ್ಲಿಸುವ ವರ್ಷ ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಎನ್‌ಐಆರ್‌ಎಫ್ ರ್ಯಾಂಕಿಂಗ್‌ನಲ್ಲಿ ಅಗ್ರ 20ರ ಒಳಗಿರಬೇಕು.
6-ಸಂಸ್ಥೆಗಳಿಗೆ ನೀಡುವ ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳ ಸ್ಥಾನಮಾನ ಮೊದಲ ಐದು ವರ್ಷಗಳ ಅವಧಿಗೆ ಹಂಗಾಮಿಯಾಗಿದ್ದು, ಯುಜಿಸಿ ಪರಾಮರ್ಶೆ ಸಮಿತಿಯ ದೃಢೀಕರಣದ ಬಳಿಕ ಅದನ್ನು ಕಾಯಂಗೊಳಿಸಲಾಗುತ್ತದೆ.
7-ಪ್ರತಿ ಸಂಸ್ಥೆಗಳು ಹಾಗೂ ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳು, ಯುಜಿಸಿ ನಿಯಮಾವಳಿ ಪ್ರಕಾರ, ಈ ಕೆಳಗಿನ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿರಬೇಕು..ಚ್ಟಎ. ರ್ಯಾಗಿಂಗ್ ತಡೆ ಘಟಕ
ಬಿ. ತಾರತಮ್ಯ ತಡೆ ಘಟಕ
ಸಿ. ಲಿಂಗ ಭಾವಸೂಕ್ಷ್ಮತೆ ಘಟಕ.ಚ್ಟಡಿ. ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿ.ಚ್ಟಇ. ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಎಲ್ಲ ಜಾಗಗಳಿಗೆ ತಡೆ ಇಲ್ಲದ ಮುಕ್ತ ಲಭ್ಯತೆ ವ್ಯವಸ್ಥೆ.
8-ಸ್ವಾಯತ್ತ ವಿಶ್ವವಿದ್ಯಾನಿಲಯಗಳಿಗೆ ಇತರ ಸಂಸ್ಥೆಗಳಿಂದ ಸಾಲವನ್ನು ಪಡೆಯಲು ಅವಕಾಶವಿದ್ದು, ಯುಜಿಸಿ ನಿಯಮಾವಳಿ ಅನ್ವಯ ಆಯ್ಕೆ ಆಧರಿತ ಸಾಲ ವ್ಯವಸ್ಥೆಯಿಂದ ಸಾಲ ಪಡೆಯಬಹುದಾಗಿದೆ.
9-ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳು ಪ್ರತಿ ಮೂರು ವರ್ಷಕ್ಕೊಮ್ಮೆ ಪಠ್ಯಕ್ರಮ ಪರಿಷ್ಕರಿಸಬೇಕು. ಆ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳನ್ನು ಅಳವಡಿಸಿಕೊಂಡು ಪರಿಷ್ಕರಿಸುವುದು ಕಡ್ಡಾಯ.
10-ಅಕ್ರಮ ನೇಮಕಾತಿ ಅಥವಾ ಯಾವುದೇ ಹಣಕಾಸು ಅಥವಾ ಆಡಳಿತಾತ್ಮಕ ಅವ್ಯವಹಾರ ಎಸಗಿದರೆ ಉಪಕುಲಪತಿಗಳನ್ನು ನೇಮಿಸುವ ಅವಕಾಶವನ್ನು ಕಲ್ಪಿಸಲಾಗಿದೆ.ನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿನಯ ಶೀಲ ಒಬೆರಾಯ್ ಮತ್ತು ಯುಜಿಸಿ ಅಧ್ಯಕ್ಷ ವೇದಪ್ರಕಾಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆಗಳನ್ನು ಮಾಡಿದ್ದಾರೆ. ಯುಜಿಸಿ ಉನ್ನತ ಶಿಕ್ಷಣ ಕುರಿತ ನಿಯಂತ್ರಣ ಚೌಕಟ್ಟಿನಲ್ಲಿ ಬದಲಾವಣೆಗಳನ್ನು ತಂದಿರುವುದನ್ನು ವಿವರಿಸಿದ್ದಾರೆ.ುುಂದಿನ ದಿನಗಳಲ್ಲಿ ಸರಕಾರದ ಹಸ್ತಕ್ಷೇಪ ಕಡಿಮೆಯಾಗಲಿದೆ. ಸರಕಾರ ತನ್ನ ನಿಯಂತ್ರಣದಲ್ಲಿರುವ ಅಥವಾ ಶೇಕಡ 50 ಅಥವಾ ಹೆಚ್ಚು ಅನುದಾನ ನೀಡುವ ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯಗಳಿಗಷ್ಟೇ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡುತ್ತದೆ. ಇತರ ಸ್ವಾಯತ್ತವಾಗುವ ವಿಶ್ವವಿದ್ಯಾನಿಲಯಗಳಿಗೆ, ಯುಜಿಸಿ, ತಜ್ಞರ ಪಟ್ಟಿಯಿಂದ ನಾಮಕರಣ ಮಾಡುತ್ತದೆ’’ ಎಂದು ಒಬೆರಾಯ್ ವಿವರಿಸಿದರು.ಹೊಸ ಚೌಕಟ್ಟು ಗುಣಮಟ್ಟದ ಬಗ್ಗೆ ಒತ್ತು ನೀಡಿದೆ. ಈ ಹೊಸ ಚೌಕಟ್ಟು ರೂಪಿಸುವ ಪ್ರಮುಖ ಉದ್ದೇಶವೆಂದರೆ, ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಗುಣಮಟ್ಟವನ್ನು ಖಚಿತಪಡಿಸುವುದು’’ ಎಂದು ಅವರು ಹೇಳಿದರು.
ಪ್ರಸ್ತುತ ದೇಶದಲ್ಲಿ 123 ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯ ಗಳಿವೆ. ಇವುಗಳಲ್ಲಿ 35 ಸರಕಾರಿ ನಿಯಂತ್ರಣದಲ್ಲಿದ್ದು, 88 ಖಾಸಗಿ ಆಡಳಿತ ಮಂಡಳಿಯನ್ನು ಹೊಂದಿವೆ.
ಕೃಪೆ: catchnews