ನೀವು ಬಯಸಿದಾಗ ವಾಟ್ಸ್ ಆ್ಯಪ್ ನಿಂದ ನಾಪತ್ತೆಯಾಗುವುದು ಹೇಗೆ?
ಹಿಂದೆ ಗೂಗಲ್ ಟಾಕ್ ಅಥವಾ ಜಿಟಾಕ್ ಬಳಸುತ್ತಿದ್ದಾಗ ಇತರರು ನಿಮಗೆ ತೊಂದರೆ ಕೊಡಬಾರದೆಂದರೆ ಇನ್ವಿಸಿಬಲ್ ಮೋಡಲ್ಲಿ ಇರಬಹುದಾಗಿತ್ತು. ಆದರೆ ಈಗ ವಾಟ್ಸ್ ಆ್ಯಪ್ ಬಳಸುತ್ತಿರುವಾಗ ಆ ಅವಕಾಶವಿಲ್ಲ. ಇದು ಬಹಳ ಕಷ್ಟದ ಸ್ಥಿತಿ. ಮೊಬೈಲ್ ಡಾಟಾ ಆಫ್ ಮಾಡದೆಯೇ ಆನ್ ಲೈನಲ್ಲಿ ಇಲ್ಲದಾಗುವುದು ಹೇಗೆ? ಏಕೆಂದರೆ ಡಾಟಾ ಬಳಸಿ ಏನಾದರೂ ಮಾಡುತ್ತಿದ್ದಲ್ಲಿ ಆಕಸ್ಮಿಕವಾಗಿ ವಾಟ್ಸ್ ಆ್ಯಪ್ ಸಂದೇಶ ಬರಬಹುದು
1. ಲಾಸ್ಟ್ ಸೀನ್ ಅಡಗಿಸಿ:
ಲಾಸ್ಟ್ ಸೀನ್ ಫೀಚರನ್ನು ಡಿಸೇಬಲ್ ಮಾಡಿದರೆ ಸಂದೇಶಕ್ಕೆ ತಕ್ಷಣವೇ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ. ಪ್ರೈವಸಿ ಟಾಬಲ್ಲಿ ಲಾಸ್ಟ್ ಸೀನ್ ಅಡಿ ನೋಬಡಿಕ್ಲಿಕ್ ಮಾಡಿ. ಹೀಗಾಗಿ ನೀವು ಕೊನೆಗೆ ವಾಟ್ಸ್ ಆ್ಯಪ್ ನೋಡಿದ್ದು ಯಾವಾಗ ಎನ್ನುವುದು ಯಾರಿಗೂ ತಿಳಿಯದು.
2. ಸ್ಟೇಟಸ್ ಅಡಗಿಸಿ:
ಸೆಟ್ಟಿಂಗ್, ಪ್ರೈವಸಿ, ಸ್ಟೇಟಸ್, ನೋಬಡಿ. ಇದನ್ನು ಕ್ಲಿಕ್ ಮಾಡಿದರೆ ಸ್ಟೇಟಸ್ ಯಾರಿಗೂ ಕಾಣದು.
3. ಪ್ರೊಫೈಲ್ ಫೋಟೋ ಅಡಗಿಸಿ:
ನಿಮ್ಮ ಪ್ರಿಯ ಸ್ನೇಹಿತರು ನಿಮ್ಮ ಇತ್ತೀಚೆಗಿನ ಪಾರ್ಟಿ ಫೋಟೋ ನೋಡಬಾರದೆಂದಿದ್ದರೆ ಅದೇ ದಾರಿ. ಸೆಟ್ಟಿಂಗ್, ಪ್ರೈವಸಿ, ಪ್ರೊಫೈಲ್ ಫೋಟೋ, ನೋಬಡಿ.
4. ಬ್ಲೂ ಸ್ಟಿಕ್ ಬೇಡ:
ಬ್ಲೂ ಸ್ಟಿಕ್ ಯಾವಾಗಲೂ ಕಷ್ಟಕ್ಕೆ ತರುತ್ತದೆ. ನೀವು ಮತ್ತೊಬ್ಬರ ಸಂದೇಶ ಓದಿರುವುದನ್ನು ಅದು ಸೂಚಿಸುತ್ತದೆ. ಇದು ಗೊತ್ತಾಗದೆ ಉಳಿಯಲೂ ದಾರಿಯಿದೆ. ಸೆಟ್ಟಿಂಗ್, ಪ್ರೈವಸಿ, ಅನ್ಚೆಕ್ ರೆಡ್ ರಿಸಿಪ್ಟ್ಸ್ ಬಾಕ್ಸ್.
5. ಸ್ನೂಜ್ ಅಥವಾ ವಾಟ್ಸ್ ಆ್ಯಪ್ ಸ್ಥಗಿತ:
ಇದು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ತಾತ್ಕಾಲಿಕವಾಗಿ ಸಂದೇಶಗಳು ಬೇಡವೆಂದರೆ ಆಂಡ್ರಾಯ್ಡ್ ಆ್ಯಪ್ ಸೆಟ್ಟಿಂಗಲ್ಲಿ ಅದನ್ನು ಮಾಡಬಹುದು. ಸೆಟ್ಟಿಂಗ್, ಆ್ಯಪ್ಸ್, ವಾಟ್ಸ್ ಆ್ಯಪ್, ಫೋರ್ಸ್ ಸ್ಟಾಪ್. ಒಮ್ಮೆ ನೀವು ವಾಟ್ಸ್ ಆ್ಯಪ್ ಅನ್ನು ಫೋರ್ಸ್ ಸ್ಟಾಪ್ ಮಾಡಿದ ಮೇಲೆ ನಂತರ ಡಾಟಾ ಕನೆಕ್ಷನ್ ಆನ್ ಇದ್ದರೂ ಸಂದೇಶ ಬರುವುದಿಲ್ಲ.
ಕೃಪೆ: http://indiatoday.intoday.in/