ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತನ ತಂದೆ ಮುಸ್ಲಿಂ ಯುವಕನಿಗೆ ಕೃತಜ್ಞತೆ ಸಲ್ಲಿಸಿದ್ದು ಏಕೆ?
"ಸ್ಕ್ರಾಲ್ ಡಾಟ್ ಇನ್" ವಿಶೇಷ ವರದಿ
ಮಂಗಳೂರು, ಜು.12: ಕೆಲ ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ದುಷ್ಕರ್ಮಿಗಳ ತಂಡವೊಂದು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಈ ಸಂದರ್ಭ ಶರತ್ ರನ್ನು ತನ್ನ ರಿಕ್ಷಾದಲ್ಲಿ ಸಾಗಿಸಿ ತುಂಬೆಯ ಆಸ್ಪತ್ರೆಗೆ ದಾಖಲಿಸಿದ್ದು, ಬಿ.ಸಿ.ರೋಡ್ ನ ಹಣ್ಣು-ಹಂಪಲು ವ್ಯಾಪಾರಿ ರವೂಫ್. ತಮ್ಮ ಅಂಗಡಿಯನ್ನೂ ಮುಚ್ಚದೆ ಗೆಳೆಯನ ನೆರವಿಗೆ ರವೂಫ್ ಧಾವಿಸಿ ಬಂದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶರತ್ ರನ್ನು ಮಂಗಳೂರಿನ ಆಸ್ಪತ್ರೆ ದಾಖಲಿಸಬೇಕು ಎಂದು ತುಂಬೆಯ ಆಸ್ಪತ್ರೆಯವರು ಹೇಳಿದಾಗಲೂ ಜೊತೆಯಾಗಿ ನಿಂತದ್ದು ಇದೇ ರವೂಫ್.
ಈ ಮೂಲಕ ಮಾನವೀಯತೆಯೇ ಧರ್ಮ ಎಂಬುದನ್ನು ಸಾರಿದ ರವೂಫ್ ರ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಕೋಮು ಗಲಭೆ ಸೃಷ್ಟಿಸುವವರಿಗೆ, ತಮ್ಮ ಲಾಭಕ್ಕೋಸ್ಕರ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುವವರಿಗೆ, ಕೋಮು ದ್ವೇಷದ ವಿಷವನ್ನೇ ತುಂಬಿಕೊಂಡಿರುವ ಸಮಾಜಘಾತುಕರಿಗೆ ರವೂಫ್ ಈ ಮೂಲಕ ಸೌಹಾರ್ದದ ಪಾಠ ಕಲಿಸಿದ್ದರು.
ಇದೀಗ ರವೂಫ್ ರಾಷ್ಟ್ರಮಟ್ಟದಲ್ಲೂ ಗುರುತಿಸಲ್ಪಟ್ಟಿದ್ದು, ಪ್ರಮುಖ ಸುದ್ದಿ ವೆಬ್ ಸೈಟ್ ಸ್ಕ್ರಾಲ್ ಡಾಟ್ ಇನ್ (scroll.in) ರವೂಫ್ ರ ಬಗ್ಗೆ “ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತನ ತಂದೆ ಮುಸ್ಲಿಂ ಯುವಕನಿಗೆ ಕೃತಜ್ಞತೆ ಸಲ್ಲಿಸಿದ್ದು ಏಕೆ?” ಎನ್ನುವ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದೆ.
ಸ್ಕ್ರಾಲ್ ಡಾಟ್ ಇನ್ (scroll.in) ಪ್ರಕಟಿಸಿದ ವಿಶೇಷ ವರದಿಯ ಲಿಂಕ್ ಇಲ್ಲಿದೆ.
https://scroll.in/article/843480/why-the-family-of-a-murdered-rss-worker-thanked-a-devout-muslim-in-karnataka