ಮಿಸ್ ಯುನಿವರ್ಸ್ ಬ್ಯೂನಸ್ಐರಿಸ್ ಕಿರೀಟ ಗೆದ್ದ 60 ವರ್ಷದ ಮಹಿಳೆ
PC : X/Alejandra Rodríguez (ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್)
ಬ್ಯೂನಸ್ಐರಿಸ್: ಅರ್ಜೆಂಟೀನಾದಲ್ಲಿ ನಡೆದ ಮಿಸ್ ಯುನಿವರ್ಸ್ ಬ್ಯೂನಸ್ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್ ಪ್ರಶಸ್ತಿ ಗೆದ್ದಿದ್ದು ದಾಖಲೆ ಬರೆದಿದ್ದಾರೆ.
60 ನೇ ವಯಸ್ಸಿನಲ್ಲಿ ಮಿಸ್ ಯುನಿವರ್ಸ್ ಕಿರೀಟ ಗೆದ್ದ ಪ್ರಥಮ ಮಹಿಳೆ ಎಂಬ ಇತಿಹಾಸವನ್ನು ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಅಲೆಕ್ಸಾಂಡ್ರಾ ಬರೆದಿದ್ದಾರೆ. ಸ್ಪರ್ಧೆಯಲ್ಲಿ 18ರಿಂದ 73 ವರ್ಷದವರೆಗಿನ 34 ಸ್ಪರ್ಧಿಗಳು ಭಾಗವಹಿಸಿದ್ದರು.
Next Story