ರಫಾ : ಇಸ್ರೇಲ್ ದಾಳಿಯಲ್ಲಿ 13 ಫೆಲೆಸ್ತೀನೀಯರ ಮೃತ್ಯು
ಸಾಂದರ್ಭಿಕ ಚಿತ್ರ | PC : PTI
ಗಾಝಾ: ದಕ್ಷಿಣ ಗಾಝಾದ ರಫಾ ನಗರದ ಮೂರು ಮನೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 13 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯಾಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ 15 ಮಂದಿ ಮೃತಪಟ್ಟಿರುವುದಾಗಿ ಹಮಾಸ್ ಮೂಲಗಳು ಹೇಳಿವೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ಪ್ರತಿಯಾಗಿ ಗಾಝಾದ ಮೇಲೆ ಇಸ್ರೇಲ್ ನಡೆಸಿದ್ದ ಆಕ್ರಮಣದಿಂದ ನೆಲೆ ಕಳೆದುಕೊಂಡಿರುವ ಲಕ್ಷಾಂತರ ಮಂದಿ ದಕ್ಷಿಣ ಗಾಝಾದ ರಫಾ ನಗರದಲ್ಲಿ ಆಶ್ರಯ ಪಡೆದಿದ್ದಾರೆ. ಇದೀಗ ರಫಾದ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿರುವ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ, ಗಾಝಾದಲ್ಲಿ ಕದನವಿರಾಮ ಜಾರಿಗೆ ಅಮೆರಿಕ ಬೆಂಬಲ, ಖತರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾತುಕತೆ ಮುಂದುವರಿದಿದ್ದು ಹಮಾಸ್ನ ಗಾಝಾ ವಿಭಾಗದ ಉಪಮುಖ್ಯಸ್ಥ ಖಲೀಲ್ ಅಲ್-ಹಯಾ ನೇತೃತ್ವದ ನಿಯೋಗ ಮಾತುಕತೆಯಲ್ಲಿ ಹಮಾಸ್ ಅನ್ನು ಪ್ರತಿನಿಧಿಸಿದೆ.
Next Story