ಎಂ.ಕೆ. ಮುಹಮ್ಮದ್
ಮಂಗಳೂರು, ಆ.19: ಮಳಲಿಪೇಟೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎಂ.ಕೆ. ಮುಹಮ್ಮದ್ (67) ರವಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಮೊನಿಯಾ ಜ್ವರದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತ ಮುಹಮ್ಮದ್ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಕಾಲ ವಿದೇಶಕ್ಕೂ ತೆರಳಿದ್ದರು. ಮಳಲಿಪೇಟೆ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮೃತರನ್ನು ಮಳಲಿ ಗ್ರಾಮದ ಮಸೀದಿ ಸಮೀಪದಲ್ಲಿ ದಫನ್ ಮಾಡಲಾಯಿತು.
ಸಂತಾಪ: ಮೃತರ ಕುಟುಂಬಕ್ಕೆ ಮಾಜಿ ಶಾಸಕ ಬಿ.ಎ. ಮೊಯ್ದಿನ್, ಮಳಲಿ ಜುಮಾ ಮಸೀದಿಯ ಅಧ್ಯಕ್ಷ ಮಾಮು ಮನೆಲ್, ಮಾಜಿ ಅಧ್ಯಕ್ಷ ಹಾಜಿ ಎಂ. ಯೂಸುಫ್, ಮಸೀದಿ ಉಪಾಧ್ಯಕ್ಷ ಎಂ.ಎ. ಅಬೂಬಕರ್, ಎಂ.ಅಬ್ದುಲ್ ರಝಾಕ್, ಮಳಲಿ ಗ್ರಾಪಂ ಸದಸ್ಯರಾದ ಅಬ್ದುಲ್ ಹಮೀದ್, ಎಂ.ರಝಾಕ್, ಇಬ್ರಾಹೀಂ ದಾರಿಮಿ, ಗುರುಪುರ ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ನೌಶಾದ್ಅಲಿ, ವಕ್ಫ್ ಬೋರ್ಡ್ ಅಧಿಕಾರಿ ಹಾಜಿ ಸಾಹುಲ್ ಹಮೀದ್, ಎಂ.ಹಮ್ಮಬ್ಬ ಮಳಲಿ ತೀವ್ರ ಸಂತಾಪ ಸೂಚಿಸಿದ್ದಾರೆ.