ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ಮತದಾನದ ಬೂತ್
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ವೋಟಿಂಗ್
ಉಡುಪಿ: ಕಳೆದ ಶುಕ್ರವಾರ ನಡೆದ 15. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ದಾಖಲೆಯ ಶೇ.77.15 ಮತದಾನವಾಗಿದೆ. ಕಳೆದ ಬಾರಿಯ (2019) ಚುನಾವಣೆಗೆ ಹೋಲಿಸಿದರೆ ಇದು ಶೇ.1.08ರಷ್ಟು ಅಧಿಕವಾಗಿದೆ.
ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಅತ್ಯಂತ ಹೆಚ್ಚು ಮತದಾನವಾಗಿರುವುದು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ. ಇಲ್ಲಿ ಕ್ಷೇತ್ರದಲ್ಲೇ ಗರಿಷ್ಠವೆನಿಸಿದ ಶೇ.80.31ರಷ್ಟು ಮಂದಿ ಮತದಾನ ಮಾಡಿದ್ದಾರೆ. ಶೃಂಗೇರಿ ಕ್ಷೇತ್ರದ ಇನ್ನೊಂದು ವೈಶಿಷ್ಟವೆಂದರೆ ಇಲ್ಲೇ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಹಾಗೂ ಅತೀ ಕಡಿಮೆ ಮತದಾನವಾದ ಬೂತ್‌ಗಳು ಸಹ ಇರುವುದು.
ಶೃಂಗೇರಿ ತಾಲೂಕಿನ ಸುಂಕದಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬೂತ್‌ನಲ್ಲಿ ಗರಿಷ್ಠ ಅಂದರೆ ಶೇ.94.78ರಷ್ಟ ಮತದಾನವಾಗಿದೆ. ಅದೇ ರೀತಿ ಇದೇ ತಾಲೂಕಿನ ದಂಡುಬಿಟ್ಟಹಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬೂತ್‌ನಲ್ಲಿ ಕನಿಷ್ಠ ಅಂದರೆ ಶೇ.40.86ರಷ್ಟು ಮಾತ್ರ ಮತದಾನ ದಾಖಲಾಗಿದೆ.
ಈ ಬಾರಿ ಚುನಾವಣೆಯ ಇನ್ನೊಂದು ವೈಶಿಷ್ಟ್ಯವೆಂದರೆ ಕ್ಷೇತ್ರದಲ್ಲೇ ಅತೀ ಹೆಚ್ಚು ಮತದಾನವಾದ 10 ಬೂತ್‌ಗಳಲ್ಲಿ ಎಂಟು ಬೂತ್‌ಗಳಿರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಾದರೆ, ಕನಿಷ್ಠ ಮತದಾನವಾದ 10 ಬೂತ್‌ಗಳಲ್ಲಿ ಎಲ್ಲವೂ ಇರುವುದು ಸಹ ಚಿಕ್ಕಮಗಳೂರು ಜಿಲ್ಲೆಯಲ್ಲೇ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗ ನೀಡಿದ ಮಾಹಿತಿಯಂತೆ ಕ್ಷೇತ್ರದಲ್ಲಿ ಗರಿಷ್ಠ ಮತದಾನವಾದ 10 ಬೂತ್‌ಗಳು.
1.ಶೃಂಗೇರಿಯ ಸುಂಕದಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ- ಶೇ.94.78,
2.ಶೃಂಗೇರಿಯ ಹೊಸೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ -ಶೇ.93.55,
3.ಮೂಡಿಗೆರೆಯ ಬಿನ್ನಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಶೇ.93,
4.ಮೂಡಿಗೆರೆಯ ರಾಮನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ಹೊಸ ಕಟ್ಟಡ) ಶೇ.92, 4.ಶೃಂಗೇರಿಯ ದೇವಗೋಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಡಕ್ಕಿ-ಶೇ.92.
5.ತರೀಕೆರೆಯ ಸೈದುಖಾನ್ ನಮ್ಮೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-ಶೇ.91.69.
6.ತರೀಕೆರೆಯ ಗುಡ್ಡದಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ- ಶೇ.91.35,
7.ಮೂಡಿಗೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌಡನಹಳ್ಳಿ-ಶೇ.90.8,
8. ಶೃಂಗೇರಿಯ ಸರಗೋಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಸ್ಕೆಮನೆ-ಶೇ.90.65,
9.ಶೃಂಗೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲಗಾರು- ಶೇ.90.42,
10.ಕಾರ್ಕಳದ ಹೆಬ್ರಿ ಬಂಗಾರುಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-ಶೇ.90.05.
ಕ್ಷೇತ್ರದಲ್ಲಿ ಕನಿಷ್ಠ ಮತದಾನವಾದ 10 ಬೂತ್‌ಗಳು.
1.ಶೃಂಗೇರಿಯ ದಂಡುಬಿಟ್ಟಹಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ- ಶೇ.40.86,
2.ಮೂಡಿಗೆರೆಯ ಕುದುರೆಮುಖ ಸರಕಾರಿ ಪ್ರೌಢಶಾಲೆ- ಶೇ.44.32,
3.ಚಿಕ್ಕಮಗಳೂರು ಸುಗ್ಗಿಕಾಲ ರಸ್ತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ ಭಾಗ)-ಶೇ.48.90,
3.ಚಿಕ್ಕಮಗಳೂರು ಕವಲ್ ಸರಕಾರಿ ಹಿರಿಯ ಪ್ರಾಥಮಿಕಶಾಲೆ (ಬಲಭಾಗ)-48.70,
4.ಚಿಕ್ಕಮಗಳೂರಿನ ಬೇಲೂರು ರಸ್ತೆ ಸರಕಾರಿ ಪದವಿ ಪೂರ್ವ ಕಾಲೇಜು- ಶೇ.49.23,
5. ಚಿಕ್ಕಮಗಳೂರು ಸುಗ್ಗಿಕಾಲ ರಸ್ತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ದಕ್ಷಿಣ ಭಾಗ)-ಶೇ.51.44
6.ಮೂಡಿಗೆರೆಯ ಸರಕಾರಿ ಪ.ಪೂ.ಕಾಲೇಜು (ದಕ್ಷಿಣ ಭಾಗ) - ಶೇ.52.31.
7.ಚಿಕ್ಕಮಗಳೂರಿನ ರಾಮನಹಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ದಕ್ಷಿಣ ಭಾಗ)-ಶೇ.52.38,
8.ತರೀಕೆರೆಯ ಕೆಮ್ಮಣ್ಣುಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಶೇ.55.50,
9. ಶೃಂಗೇರಿಯ ನಂದಿಗವೆ ಅಂಗನವಾಡಿ ಕೇಂದ್ರ-ಶೇ.55.56.
10. ಮೂಡಿಗೆರೆ ಸರಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ (ಉತ್ತರ ಭಾಗ)-ಶೇ 58.77.
ಕ್ಷೇತ್ರದ ಗರಿಷ್ಠ ಮತ್ತು ಕನಿಷ್ಠ ಮತದಾನವಾದ ಬೂತ್‌ಗಳಲ್ಲಿ ಉಡುಪಿ ಜಿಲ್ಲೆಯ ಒಂದು ಬೂತ್ ಮಾತ್ರ ಗರಿಷ್ಠ ಮತದಾನ ದಲ್ಲಿ ಸ್ಥಾನ ಪಡೆದಿವೆ. ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಹೆಬ್ರಿಯ ಬಂಗಾರುಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-ಶೇ.90.05 ಮತದಾನದೊಂದಿಗೆ ಹತ್ತನೇ ಸ್ಥಾನದಲ್ಲಿದೆ.
ಉಡುಪಿ ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಗರಿಷ್ಠ ಮತ್ತು ಕನಿಷ್ಠ ಮತದಾನವಾದ ಬೂತ್‌ಗಳ ವಿವರ ಹೀಗಿದೆ.
ಕುಂದಾಪುರ: ಗರಿಷ್ಠ-ಸುರ್ಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ -ಶೇ.88.40, ಕನಿಷ್ಠ- ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ (ರೂಮ್ ನಂ.ಎಸ್1)-ಶೇ.69.10. ಉಡುಪಿ: ಗರಿಷ್ಠ-ಬಿ.ವಿ.ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೀಳಂಜೆ- ಶೇ.87.68, ಕನಿಷ್ಠ-ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜರಕಾಡು (ಪೂರ್ವಭಾಗ) -ಶೇ60.70.
ಕಾಪು: ಗರಿಷ್ಠ- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾದೆಬೆಟ್ಟು (ಪಶ್ಚಿಮ ಭಾಗ)-ಶೇ.89.32, ಕನಿಷ್ಠ-ಪಿಲಾರು ಫಾತಿಮಾ ಹಿರಿಯ ಪ್ರಾಥಮಿಕ ಶಾಲೆ (ಪೂರ್ವ ಭಾಗ) ಪೆರ್ನಾಲ್-ಶೇ.69.71. ಕಾರ್ಕಳ: ಗರಿಷ್ಠ-ಹೆಬ್ರಿಯ ಬಂಗಾರುಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-ಶೇ.90.05, ಕನಿಷ್ಠ-ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜು (ಉತ್ತರ ಭಾಗ)- ಶೇ.69.31