Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
  4. ಕಲೆಯ ಮೂಲಕ ಬೆಂಗಳೂರು ರಸ್ತೆಗಳನ್ನು...

ಕಲೆಯ ಮೂಲಕ ಬೆಂಗಳೂರು ರಸ್ತೆಗಳನ್ನು ಮಹಿಳಾ ಸ್ನೇಹಿಗೊಳಿಸುತ್ತಿರುವ ಕಲಾವಿದೆ

ಪಂಜು ಗಂಗೊಳ್ಳಿಪಂಜು ಗಂಗೊಳ್ಳಿ8 Jan 2025 12:31 PM IST
share
ಕಲೆಯ ಮೂಲಕ ಬೆಂಗಳೂರು ರಸ್ತೆಗಳನ್ನು ಮಹಿಳಾ ಸ್ನೇಹಿಗೊಳಿಸುತ್ತಿರುವ ಕಲಾವಿದೆ

ಸುಮಾರು 20 ವರ್ಷಗಳಿಂದ ’ಬ್ಯುಸಿನೆಸ್ ಇಂಡಿಯಾ’ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಪಂಜು ಗಂಗೊಳ್ಳಿ ಅವರು ಲೇಖಕರು, ಪತ್ರಕರ್ತರಾಗಿಯೂ ಗುರುತಿಸಲ್ಪಟ್ಟಿದ್ದಾರೆ. 1962ರ ಆಗಸ್ಟ್ 01ರಂದು ಕುಂದಾಪುರದ ಗಂಗೊಳ್ಳಿಯಲ್ಲಿ ಜನಿಸಿದ ಇವರು ಲಂಕೇಶ್ ಪತ್ರಿಕೆ, ಮುಂಗಾರು ಸೇರಿದಂತೆ ಹಲವು ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಪ್ರೀತೀಶ್ ನಂದಿ ಸಂಪಾದಕತ್ವದ ‘ದಿ ಸಂಡೇ ಅಬ್ಸರ್ವರ್’ ಪತ್ರಿಕೆಯ ಮೂಲಕ ಇಂಗ್ಲಿಷ್ ಪತ್ರಿಕೋದ್ಯಮ ಪ್ರವೇಶಿಸಿದರು. ‘ಮೂಢನಂಬಿಕೆಗಳ ವಿಶ್ವರೂಪ’, ‘ರುಜು’ ಇವರ ಪ್ರಕಟಿತ ಕೃತಿಗಳು. ಇವರ ನೇತೃತ್ವದಲ್ಲಿ ಹೊರ ಬಂದಿರುವ ‘ಕುಂದಾಪ್ರ ಕನ್ನಡ ನಿಘಂಟು’ ಭಾಷಾ ಸಂಶೋಧನೆಗೆ ಮಹತ್ತರ ಕೊಡುಗೆಯಾಗಿದೆ.

ಏಳು ವರ್ಷಗಳ ಹಿಂದೆ 41 ವರ್ಷ ಪ್ರಾಯದ ಕಲಾವಿದೆ ಇಂದೂ ಆಂಟನಿಯವರು ಒಂದು ದಿನ ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿ ನಡೆದು ಹೋಗುತ್ತಿದ್ದರು. ಆಗ ಒಂದಿಬ್ಬರು ಹುಡುಗರು ಅವರೆದುರು ಬಂದು, ಪಿಚಕ್ಕನೆ ಅವರ ಮುಖದ ಮೇಲೆ ಉಗಿದು ಹೋದರು! ಒಮ್ಮೆಗೆ ಆಘಾತವಾದಂತಾದ ಇಂದೂ ಆಂಟನಿ ಗರ ಬಡಿದವರಂತೆ ನಿಂತರು. ಆ ಮಕ್ಕಳು ಯಾಕೆ ತನ್ನ ಮುಖದ ಮೇಲೆ ಉಗಿದರು ಎಂಬುದು ತಿಳಿಯದೆ ಅವರು ಸ್ವಲ್ಪ ಹೊತ್ತು ಗೊಂದಲಕ್ಕೀಡಾದರು. ಮನೆಗೆ ಹೋಗಿ ಎಂಜಲು ತಾಕಿದ ಮುಖ ಮತ್ತು ಟೀ-ಶರ್ಟನ್ನು ತೊಳೆದುಕೊಂಡರು. ಯಾವುದೇ ಕಾರಣವಿಲ್ಲದೆ ಆ ಮಕ್ಕಳು ತನ್ನ ಮೇಲೆ ಉಗಿದ ಬಗ್ಗೆ ಎಷ್ಟೇ ಯೋಚಿಸಿದರೂ ಅವರಿಗೆ ಏನೂ ಅರ್ಥವಾಗಲಿಲ್ಲ.

ಇಂದೂ ಆಂಟನಿಯವರು ಅದಕ್ಕೂ ಮೊದಲು ಹಲವು ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಗಂಡಸರು ಅವರ ಮೈ ಮುಟ್ಟುವ, ಅಂಗಾಂಗ ಸವರುವ ಕಿರುಕುಳಗಳಿಗೆ ಒಳಗಾಗಿದ್ದರು. ಆದರೆ, ಹಾಗೆ ಮುಖದ ಮೇಲೆ ಉಗಿದ ಘಟನೆ ನಡೆದುದು ಅದೇ ಮೊದಲು. ಆ ಘಟನೆ ಇಂದೂ ಆಂಟನಿಯವರನ್ನು ಭಾರತದ ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಪ್ರತಿನಿತ್ಯ ಎದುರಿಸುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿತು. ಇಂದೂ ಆಂಟನಿ ಚಿಕ್ಕವರಾಗಿದ್ದಾಗ ಅವರ ಅಮ್ಮ, ಬಸ್ಸಲ್ಲಿ ಯಾರಾದರೂ ಗಂಡುಗಳು ಮೈ ಮುಟ್ಟಿದರೆ ಅವರ ಕೈಗೆ ಚುಚ್ಚಿ ಬಿಡು ಎಂದು ಅವರಿಗೆ ಒಂದು ಸೇಫ್ಟಿ ಪಿನ್ನು ಕೊಡುತ್ತಿದ್ದರು. ಮೊದಲು ವೈದ್ಯರಾಗಿದ್ದು ನಂತರ ಕಲಾವಿದೆಯಾಗಿ ಬದಲಾದ ಇಂದೂ ಆಂಟನಿಯವರು ಸಾರ್ವಜನಿಕ ಸ್ಥಳಗಳಲ್ಲಿ ಹೆಂಗಸರು ಒಳಗಾಗುವ ಲೈಂಗಿಕ ಕಿರುಕುಳಗಳನ್ನು ಎದುರಿಸಲು ಸೇಫ್ಟಿ ಪಿನ್ನಿನ ಬದಲು ಕಲೆಯನ್ನು ಬಳಸಲು ಯೋಚಿಸಿ, 2018ರಲ್ಲಿ ‘ಸಿಸಿಲಿಎಡ್’ ಎಂಬ ಒಂದು ‘ಆರ್ಟ್ ಪ್ರಾಜೆಕ್ಟ್’ನ್ನು ಹುಟ್ಟು ಹಾಕಿದರು.

‘ಸಿಸಿಲಿಎಡ್’ ಎಂಬ ಈ ವಿನೂತನ ಹೆಸರಿಗೆ ಸಿಸಿಲಿಯಾ ಎಂಬ ಮಹಿಳೆ ಪ್ರೇರಣೆ. ಈಗ 70 ವರ್ಷ ಪ್ರಾಯವಾಗಿರುವ ಸಿಸಿಲಿಯಾ ಒಬ್ಬ ಬಿಂದಾಸ್ ಒಂಟಿ ಮಹಿಳೆ. ಇವರು ಮಲ್ಲೇಶ್ವರಂ ರಸ್ತೆಗಳಲ್ಲಿ ಕಣ್ಣು ಕುಕ್ಕುವ ರಂಗುರಂಗಿನ ಟೋಪಿ, ಉಡುಪು ಧರಿಸಿ ಸೈಕಲ್ ಸವಾರಿ ಮಾಡುತ್ತ ನಿರಾಯಾಸವಾಗಿ ಸುತ್ತಲಿನವರನ್ನು ತನ್ನತ್ತ ಸೆಳೆಯುವ ಒಬ್ಬ ಸ್ಥಳೀಯ ಸೆಲೆಬ್ರಿಟಿ. ಬೀದಿಗಳಲ್ಲಿ ಮಾರುವ ಅಗ್ಗದ ಫ್ಯಾಷನ್ ಉಡುಪುಗಳನ್ನು ಖರೀದಿಸಿ, ಅದನ್ನೇ ಉಟ್ಟು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ವಯಸ್ಸಾಗಿ ಏಕಾಂಗಿಯಾಗಿ ಬದುಕುತ್ತಿರುವ ಅವರ ಮನೆಯಿರುವ ಜಾಗವನ್ನು ಕಬಳಿಸಲು ಲ್ಯಾಂಡ್ ಶಾರ್ಕ್‌ಗಳು ಹೊಂಚು ಹಾಕುತ್ತಿದ್ದರೂ ಸಿಸಿಲಿಯಾ ಅದೆಲ್ಲವನ್ನು ಧೈರ್ಯವಾಗಿ ಎದುರಿಸುತ್ತಿದ್ದಾರೆ.

ಸಾಮಾನ್ಯವಾಗಿ, ಯಾವುದೇ ನಗರದ ಯಾವುದೇ ರಸ್ತೆಯನ್ನು ನೋಡಿದರೂ ಅಲ್ಲಿ ಪುರುಷರಿಗೆ ಸಂಬಂಧಿತ ಅಂಗಡಿಗಳೇ ಹೆಚ್ಚಿರುತ್ತವೆ. ಉದಾಹರಣೆಗೆ, ಒಂದು ಕ್ಷೌರದಂಗಡಿ, ಅದರ ಪಕ್ಕದಲ್ಲಿ ಒಂದು ಹಾರ್ಡ್ ವೇರ್ ಅಂಗಡಿ. ಅದರ ಬದಿಯಲ್ಲೊಂದು ದ್ವಿಚಕ್ರ ರಿಪೇರಿ ಅಂಗಡಿ. ಅದಕ್ಕೆ ತಾಗಿಕೊಂಡು ಒಂದು ವೈನ್ ಶಾಪೋ ಅಥವಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಏನೋ ಇರುತ್ತದೆ. ಅದರ ಬದಿಯಲ್ಲಿ ಒಂದು ಪೈಂಟ್ ಅಂಗಡಿ. ಅದರ ಹತ್ತಿರ ಒಂದು ಬಸ್ ಸ್ಟಾಪ್...ಹೀಗೆ. ಇಲ್ಲೆಲ್ಲ ಪುರುಷರು ಕುಳಿತು ಮಾತಾಡುವುದು, ನಿಂತು ಬೀಡಿ ಸಿಗರೇಟ್ ಸೇದುವುದು, ಶರ್ಟಿನ ಗುಂಡಿಗಳನ್ನು ತೆರೆದು ಕೂಗಾಡುವುದು, ತಂಬಾಕು ಜಗಿಯುವುದು ಅಥವಾ ನಾಲ್ಕಾರು ಜನ ಸೇರಿ ಏನೋ ಲೋಕಾಭಿರಾಮವಾಗಿ ಮಾತಾಡುವ ದೃಶ್ಯ ತೀರಾ ಸಾಮಾನ್ಯ. ಇಂತಹ ಪುರುಷ ಪ್ರಾಧಾನ್ಯ ಜಾಗಗಳಲ್ಲಿ ಹಾದು ಹೋಗುವ ಮಹಿಳೆಯರು ಬೀದಿ ಕಾಮಣ್ಣರ ಶಿಳ್ಳೆ, ಅಶ್ಲೀಲ ಮಾತುಗಳು, ಲೈಂಗಿಕ ಸನ್ನೆ ಮೊದಲಾದ ರೀತಿಯ ಚುಡಾಯಿಸುವಿಕೆಗೆ ಒಳಗಾಗುತ್ತಾರೆ.

ನಗರಗಳಲ್ಲಿ ಮಹಿಳೆಯರು ಪುರುಷರಂತೆಯೇ ಸುಲಭದಲ್ಲಿ, ಸುರಕ್ಷಿತವಾಗಿ ಹೋಗಿ ಬರುವಂತಹ ಅಥವಾ ಒಂದೆಡೆ ಕುಳಿತು ಮಾತಾಡುವಂತಹ ಅಂಗಡಿಗಳಾಗಲೀ, ಕಟ್ಟೆಗಳಂತಹ ಜಾಗಗಳಾಗಲೀ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಹಾಗೇನಾದರೂ ಯಾವುದಾದರೂ ರಸ್ತೆ ಬದಿಯಲ್ಲಿ ನಾಲ್ಕಾರು ಜನ ಮಹಿಳೆಯರು ನಿಂತು ಮಾತಾಡಿದರೆ ಹೋಗಿ ಬರುವವರಿಗೆ ಅದೊಂದು ಕುತೂಹಲದ ದೃಶ್ಯವಾಗಿ ಮಾರ್ಪಡುತ್ತದೆ. ಅಂದರೆ, ನಗರಗಳಲ್ಲಿನ ಸಾರ್ವಜನಿಕ ಸ್ಥಳಗಳು ಪುರುಷ ಸ್ನೇಹಿಗಳಾಗಿವೆಯೇ ವಿನಃ ಮಹಿಳಾ ಸ್ನೇಹಿಗಳಾಗಿಲ್ಲ. ಈಗೀಗಂತೂ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಮಹಿಳೆಯರಿಗೆ ಲೈಂಗಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಅಪಾಯಕಾರಿ ಜಾಗಗಳಾಗಿ ಮಾರ್ಪಟ್ಟಿವೆ. ಪ್ರತೀ ದಿನ ಮಹಿಳೆಯರ ಕತ್ತಿನಿಂದ ಸರ ಎಗರಿಸುವುದು, ಬ್ಯಾಗು ಕಸಿಯುವುದು ಮೊದಲಾದ ಪ್ರಕರಣಗಳು ಸಾಮಾನ್ಯ ಎಂಬಂತಾಗಿವೆ.

‘ಸಾರ್ವಜನಿಕ ಸ್ಥಳಗಳ ಮರುಸ್ವಾಧೀನ’

ಇಂದೂ ಆಂಟನಿ ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಮೂಲಕ, ಸ್ಥಳೀಯ ಪೊಲೀಸ್ ಸ್ಟೇಷನ್‌ಗಳ ಮೂಲಕ ಬೆಂಗಳೂರಲ್ಲಿ ಮಹಿಳೆಯರ ಮೇಲೆ ಹೆಚ್ಚು ಕಿರುಕುಳಗಳು ನಡೆಯುವ ಪ್ರದೇಶಗಳನ್ನು ಪಟ್ಟಿ ಮಾಡಿದರು. ಕೆಲವು ಪ್ರದೇಶಗಳಲ್ಲಿ ಕುಡುಕರು ರಸ್ತೆ ದೀಪಗಳಿಗೆ ಕಲ್ಲು ಹೊಡೆದು, ಆ ಪ್ರದೇಶವನ್ನು ಕತ್ತಲಾಗಿಸಿ ತಮ್ಮ ಅಡ್ಡೆಗಳನ್ನಾಗಿಸಿಕೊಳ್ಳುತ್ತಾರೆ. ಇಂತಹ ಸ್ಥಳಗಳಿಗೆ ಕತ್ತಲಾದ ಮೇಲೆ ಯಾವ ಮಹಿಳೆಯೂ ಹೋಗುವಂತಿಲ್ಲ. ಇಂದೂ ಆಂಟನಿ ಇಂತಹ ಸ್ಥಳಗಳನ್ನು ಆದಷ್ಟು ಮಹಿಳಾ ಸ್ನೇಹಿಯಾಗಿ ಪರಿವರ್ತಿಸುವ ಸಲುವಾಗಿ ‘ಸಾರ್ವಜನಿಕ ಸ್ಥಳಗಳ ಮರುಸ್ವಾಧೀನ’ ಎಂಬ ಒಂದು ಆಂದೋಲನವನ್ನು ಪ್ರಾಂಭಿಸಿದರು.

ಯಾವ ರಸ್ತೆಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ದಾಳಿ ನಡೆಯುತ್ತದೆ ಎಂಬುದನ್ನು ತಿಳಿದು ಅಂತಹ ರಸ್ತೆಗಳಲ್ಲಿ ಇಂದೂ ಆಂಟನಿ ಮತ್ತು ಅವರ ಸಹಚರರು ಅಕ್ಕಪಕ್ಕದ ಮಹಿಳೆಯರನ್ನು ಜಮಾ ಮಾಡಿ, ‘ರಸ್ತೆ ಪುನರುದ್ಘಾಟನೆ’ ಎಂಬ ಒಂದು ತೆರೆದ ಸಾರ್ವಜನಿಕ ಸಮಾರಂಭವನ್ನು ನಡೆಸುತ್ತಾರೆ. ಈ ರಸ್ತೆ ಪುನರುದ್ಘಾಟನೆ ಸಮಾರಂಭಕ್ಕೆ ಸುತ್ತಮುತ್ತಲ ಜನರಿಗೆ ಆಮಂತ್ರಣ ಪತ್ರಿಕೆಗಳನ್ನು ಕಳಿಸಲಾಗುತ್ತದೆ. ಸಿಸಿಲಿಯಾ ಆ ಸಮಾರಂಭಕ್ಕೆ ತನ್ನ ಫ್ಯಾನ್ಸಿ ಕಾರು ಚಲಾಯಿಸಿಕೊಂಡು ಬಂದು ಭರ್ಜರಿ ಎಂಟ್ರಿ ಕೊಡುತ್ತಾರೆ. ಸ್ಥಳಿಯ ಕಾರ್ಪೊರೇಟರ್, ಇತರ ಗಣ್ಯರು ಮತ್ತು ಅಂಗನವಾಡಿ ಶಿಕ್ಷಕಿಯರು ವೇದಿಕೆಯಲ್ಲಿರುತ್ತಾರೆ. ರಿಬ್ಬನ್ ಕತ್ತರಿಸಿ, ಹಿಂದೆ ಯಾವತ್ತೋ ಉದ್ಘಾಟಿಸಲ್ಪಟ್ಟಿದ್ದ ರಸ್ತೆಯನ್ನು ಪುನರುದ್ಘಾಟಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಭಾಷಣ ಮಾಡುತ್ತಾರೆ. ತೆರೆದ ಸಮಾರಂಭವಾದುದರಿಂದ ಆಚೀಚೆ ಹೋಗುವವರು ಕುತೂಹಲದಿಂದ ನಿಂತು ನೋಡುತ್ತಾರೆ. ಇಂದೂ ಆಂಟನಿಯವರ ಜೊತೆಗಾರರು ಅವರೊಂದಿಗೆ ಮಾತುಕತೆ ಪ್ರಾರಂಭಿಸಿ ಆ ಕಾರ್ಯಕ್ರಮದ ಉದ್ದೇಶ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಅನುಭವಿಸುವ ವಿವಿಧ ರೀತಿಯ ಕಿರುಕುಳಗಳ ಬಗ್ಗೆ ಅವರಿಗೆ ವಿವರಿಸುತ್ತಾರೆ. ಆ ರಸ್ತೆಯಲ್ಲಿ ವಿದ್ಯುತ್ ದೀಪಗಳನ್ನು ಒಡೆದು ಹಾಕಲಾಗಿದ್ದರೆ ಬೆಸ್ಕಾಮ್‌ನಿಂದ ಕೆಲಸಗಾರರನ್ನು ಬರಮಾಡಿಕೊಂಡು, ಅವರಿಂದ ಹೊಸ ವಿದ್ಯುತ್ ದೀಪಗಳನ್ನು ಲಗತ್ತಿಸಿಕೊಳ್ಳುತ್ತಾರೆ.

ಹೀಗೆ, ಇಂದೂ ಆಂಟನಿ ‘ಸಾರ್ವಜನಿಕ ಸ್ಥಳಗಳ ಮರು ಸ್ವಾಧೀನ’ ಎಂಬ ಈ ವಿನೂತನ ಕಾರ್ಯಕ್ರಮದ ಮೂಲಕ ಬೆಂಗಳೂರಿನ ಹಲವಾರು ರಸ್ತೆಗಳನ್ನು ಮಹಿಳಾ ಸ್ನೇಹಿಯನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದಾರೆ. ಹೀಗೆ ಮರುಉದ್ಘಾಟಿಸಿದ ರಸ್ತೆಗಳನ್ನು ಗೂಗಲ್ ಮ್ಯಾಪಲ್ಲಿ ಮಾರ್ಕ್ ಮಾಡುತ್ತಾರೆ.

ನಮ್ಮ ಕಟ್ಟೆ

ನಗರ ಪ್ರದೇಶಗಳಲ್ಲಿ ಬಿಡಿ, ಗ್ರಾಮೀಣ ಪ್ರದೇಶಗಳಲ್ಲೂ ಸಾಮಾನ್ಯವಾಗಿ ಮಹಿಳೆಯರು ಕುಳಿತು ಹರಟೆ ಹೊಡೆಯುವಂತಹ ಸಾರ್ವಜನಿಕ ಸ್ಥಳಗಳಿರುವುದಿಲ್ಲ. ಅದೇ, ಪುರುಷರು ಕುಳಿತು ಹರಟೆ ಹೊಡೆಯುವ, ಬೀಡಿ ಸಿಗರೇಟು ಸೇದುವ, ಎಲೆ ಅಡಿಕೆ ಜಗಿಯುವ ಕಟ್ಟೆಗಳಂತಹ ಸಾರ್ವಜನಿಕ ಸ್ಥಳಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಅಂತಹ ಸ್ಥಳ ಎಲ್ಲಿಯೂ ಇಲ್ಲವಾದರೆ ನಾಲ್ಕಾರು ಜನ ಪುರುಷರು ಸೇರಿ ಅಂತಹ ಸ್ಥಳವೊಂದನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಒಂದು ವೇಳೆ ನಾಲ್ಕಾರು ಮಹಿಳೆಯರು ಹೀಗೆ ನಿಂತೋ, ಕುಳಿತೋ ಹರಟೆ ಹೊಡೆಯಬೇಕಿದ್ದರೆ ಅದು ಮನೆಯಂತಹ ಯಾವುದಾರೂ ಮುಚ್ಚಿದ ಜಾಗವಾಗಿರಬೇಕು ಎಂಬುದು ಸಮಾಜದ ಅಲಿಖಿತ ಕಟ್ಟಳೆಯಾಗಿದೆ. ಅಷ್ಟೇ ಅಲ್ಲ, ಮನೆಗಳಂತಹ ಸುರಕ್ಷಿತ ಜಾಗಗಳಲ್ಲೂ ಮಹಿಳೆಯರು ಹಾಗೆ ‘ಸುಮ್ಮನೆ’ ಕುಳಿತು ಸಮಯ ಕಳೆಯುವಂತಿಲ್ಲ. ಅದು ಮಾಡು, ಇದು ಮಾಡು, ಅಡುಗೆ ಮಾಡು, ಪಾತ್ರೆ ತೊಳೆ, ಬಟ್ಟೆ ಒಗೆ, ಮಕ್ಕಳ ಹೋಮ್ ವರ್ಕ್ ಮಾಡು ಅಂತ ಮನೆಯ ಪುರುಷ ಸದಸ್ಯರುಗಳಿಂದ ಅವರಿಗೆ ‘ಆರ್ಡರ್’ ಬರುತ್ತಿರುತ್ತವೆ. ಇಂದೂ ಆಂಟನಿ 2022ರ ಫೆಬ್ರವರಿ 28ರಂದು ಬಾಣಸವಾಡಿ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿರುವ ಸ್ಲಮ್ಮಿನಲ್ಲಿ ‘ನಮ್ಮ ಕಟ್ಟೆ’ ಎಂಬ ಒಂದು ಜಾಗವನ್ನು ರಚಿಸಿ, ಉದ್ಘಾಟಿಸಿದರು. ಈ ಜಾಗದಲ್ಲಿ ಬೆಳಗ್ಗಿನ 10ರಿಂದ ಸಂಜೆ 6 ರ ತನಕ ಮಹಿಳೆಯರು ಬಂದು ಕುಳಿತು ಹರಟೆ ಹೊಡೆಯಬಹುದು; ಕುಣಿಯಬಹುದು; ಹಾಡಬಹುದು; ಕೂಗಬಹುದು. ಇಲ್ಲಿ ಯಾವುದೇ ಧರ್ಮ, ಜಾತಿ, ಭಾಷೆ, ವರ್ಗ ಮೊದಲಾದವುಗಳ ಭೇದವಿಲ್ಲ.

ನಮ್ಮ ಕಟ್ಟೆಗೆ ಬರುವ ಮಹಿಳೆಯರಲ್ಲಿ ಹೆಚ್ಚಿನವರು ಪಕ್ಕದ ಕುಕ್ ಟೌನ್ ಹಾಗೂ ಇತರ ಶ್ರೀಮಂತ ಬಡಾವಣೆಗಳಲ್ಲಿ ಮನೆಗೆಲಸ ಮಾಡುವವರು. ಅವರು ತಮ್ಮ ಶಿಫ್ಟ್ ಗಳು ಮುಗಿದ ಮೇಲೆ ‘ನಮ್ಮ ಕಟ್ಟೆ’ಗೆ ಬಂದು ವಿಶ್ರಾಂತಿ ಪಡೆಯುತ್ತಾರೆ. ಪರಿಚಿತರು, ಅಪರಿಚಿತ ಮಹಿಳೆಯರು ಪರಸ್ಪರ ಕಷ್ಟಸುಖ ಹೇಳಿಕೊಳ್ಳುತ್ತಾರೆ. ನಮ್ಮ ಕಟ್ಟೆಯಲ್ಲಿ ಒಂದು ಉಯ್ಯಾಲೆಯನ್ನು ನೇತು ಹಾಕಲಾಗಿದೆ. ಮಹಿಳೆಯರು ಇದರ ಮೇಲೆ ಕುಳಿತು ತಮ್ಮನ್ನು ತಾವೇ ತೂಗಿಕೊಳ್ಳುತ್ತ ಕೆಲಹೊತ್ತು ಕೆಲಸದ ಶ್ರಮವನ್ನು ಮರೆಯಬಹುದು. ತಮ್ಮ ಬಾಲ್ಯದಲ್ಲಿ ಸಿಗದ ಖುಶಿಯನ್ನು ಇಲ್ಲಿ ಪಡೆಯಬಹುದು. ನಮ್ಮ ಕಟ್ಟೆಯ ಇನ್ನೊಂದು ವಿಶೇಷವೆಂದರೆ, ಇಲ್ಲಿ ಮಹಿಳೆಯರು ತಮ್ಮ ಬದುಕಿನ ಅನುಭವಗಳನ್ನು, ತಮ್ಮ ನೋವು ನಲಿವುಗಳನ್ನು ಚಿಕ್ಕ ಚಿಕ್ಕ ಪೋಸ್ಟರುಗಳಲ್ಲಿ ಬರೆದು ನೇತು ಹಾಕಬಹುದು.

share
ಪಂಜು ಗಂಗೊಳ್ಳಿ
ಪಂಜು ಗಂಗೊಳ್ಳಿ
Next Story
X