ಮದ್ರಸ ಪಬ್ಲಿಕ್ ಪರೀಕ್ಷೆ: 10ನೇ ತರಗತಿಯಲ್ಲಿ ಶೇರ ಮದ್ರಸ ವಿದ್ಯಾರ್ಥಿನಿ ಮರ್ಯಂ ಸ್ವಾಬಿರಗೆ 100 ಶೇ. ಅಂಕ

ಬಂಟ್ವಾಳ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ, 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಮರ್ಯಂ ಸ್ವಾಬಿರ ಶೇಕಡ 100 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.
ಬಂಟ್ವಾಳ ತಾಲೂಕು ಮಾಣಿ ರೇಂಜ್ ಗೊಳಪಟ್ಟ ಶೇರ ಮಅದನುಲ್ ಉಲೂಂ ಮದ್ರಸದ ವಿದ್ಯಾರ್ಥಿನಿಯಾಗಿರುವ ಈಕೆ 400ರಲ್ಲಿ 400 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈಕೆ ಶೇರ ನಿವಾಸಿ ಅಬ್ದುಲ್ ಲತೀಫ್ ಸಅದಿ ಮತ್ತು ಸಕೀನಾ ದಂಪತಿಯ ಪುತ್ರಿ.
Next Story