ತಲಪಾಡಿ: ಡಿ.15ರಂದು ಅಲ್ ಫಲಾಹ್ ಮಸೀದಿಯಲ್ಲಿ 'ಕುಟುಂಬ ಸಂಗಮ' ಕಾರ್ಯಕ್ರಮ

ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್ ಹಾಗೂ ಕೆ.ಸಿ.ರೋಡ್ ತಲಪಾಡಿಯ ಅಲ್ ಫಲಾಹ್ ಮಸೀದಿಯ ವತಿಯಿಂದ ಡಿ.15ರಂದು ಕೌಟುಂಬಿಕ ಕಲಹ, ವಿವಾಹ ವಿಚ್ಛೇದನ, ಡ್ರಗ್ಸ್ ದಾಸ್ಯತ್ವ, ವಿಶ್ವಾಸ-ಅಪನಂಬಿಕೆ ಮುಂತಾದ ವಿಷಯಗಳಲ್ಲಿ ಮೋಟಿವೇಶನ್ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 4ರಿಂದ ರಾತ್ರಿ 10ರವರೆಗೆ ಅಲ್ ಫಲಾಹ್ ಮಸೀದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ಕೇರಳ ಕ್ಯಾಲಿಕೆಟ್ ಫರೂಕ್ ಕಾಲೇಜಿನ ಪ್ರೊಫೆಸರ್ ಡಾ.ಜೌಹರ್ ಮುನವ್ವರ್, ಕಲ್ಲಾಪುವಿನ ಅಲ್ ಬಯಾನ್ ಕಾಲೇಜು ಪ್ರಾಂಶುಪಾಲ ಡಾ.ಮುಹಮ್ಮದ್ ಹಫೀಝ್ ಸ್ವಲಾಹಿ, ಪ್ರಾಧ್ಯಾಪಕರಾದ ಮುಜಾಹಿದ್ಅಲ್ ಹಿಕಮಿ, ಹಾರಿಸ್ ಕಾಯಕ್ಕೋಡಿ, ಅಲ್ ಅಂಬಿಯಾ ಅರಬಿಕ್ ಅಕಾಡಮಿಯ ಮುಖ್ಯ ಅಧ್ಯಾಪಕ ಯಾಸಿರ್ ಅಲ್ ಹಿಕಮಿ ತರಗತಿ ನಡೆಸಲಿದ್ದಾರೆ ಎಂದು ಕರ್ನಾಟಕ ಸಲಫಿ ಅಸೋಸಿಯೇಶನ್ ಇದರ ಪ್ರಧಾನ ಕಾಂರ್ದರ್ಶಿ ಯಾಸಿರ್ ಅಲ್ ಹಿಕಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story