ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್: ವಾಮಂಜೂರಿನ ರಶ್ವಿತ್ಗೆ 2ನೇ ಸ್ಥಾನ
ಗುರುಪುರ: ಮೂಡುಶೆಡ್ಡೆಯ ಶಾರದಾ ವಿದ್ಯಾಲಯದ ವಿದ್ಯಾರ್ಥಿ ರಶ್ವಿತ್ ಅವರು ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಆಂಧ್ರ ಪ್ರದೇಶದ ಧುಲಿಯಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ರಶ್ವಿತ್ ಅವರು ಪ್ರಥಮ ಸ್ಥಾನ ಹಾಗೂ ಗಾಝಿಯಾಬಾದ್ನ ಸ್ವಸ್ತಿಕ್ ವಿದ್ಯಾ ಮಂದಿರ ನೆಹರೂ ನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರು ವಾಮಂಜೂರು ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿಯ ಸದಸ್ಯರಾಗಿದ್ದು, ದಯಾನಂದ ಬಂಗೇರ ಮತ್ತು ಸೌಮ್ಯಾ ದಂಪತಿಯ ಪುತ್ರನಾಗಿದ್ದಾರೆ.
Next Story