ಬಂಟ್ವಾಳ : ಪಂಚ ಗ್ಯಾರಂಟಿ ಸರಕಾರಕ್ಕೆ 2ನೇ ವರ್ಷ; ಕಾಂಗ್ರೆಸ್ ವತಿಯಿಂದ ಸಂಭ್ರಮೋತ್ಸವ ಕಾರ್ಯಕ್ರಮ

ಬಂಟ್ವಾಳ : ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಇಡೀ ದೇಶಕ್ಕೇ ಮಾದರಿ ಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ (ಮೈಸೂರು ವಿಭಾಗ) ಪುಷ್ಪಾ ಅಮರನಾಥ್ ಹೇಳಿದರು.
ಅವರು ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಪಂಚ ಗ್ಯಾರಂಟಿ ಸರಕಾರಕ್ಕೆ 2 ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಸಂಭ್ರಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಯನ್ನು ವಿರೋಧಿಸಿದವರೇ ಇಂದು ಕರ್ನಾಟಕದ ಕಾಂಗ್ರೆಸ್ ಆಡಳಿತವನ್ನು ನಕಲು ಮಾಡಿಕೊಂಡು ಅಧಿಕಾರಕ್ಕೆ ಬರಲು ಯತ್ನಿಸಿದ್ದಾರೆ, ಕಾಂಗ್ರೆಸ್ ಪಕ್ಷ ಬದುಕು ಕಟ್ಟುವ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ ಹೊರತು ಭಾವನೆಗಳನ್ನು ಘಾಸಿಗೊಳಿಸುವ ಮೂಲಕ ಅಧಿಕಾರಕ್ಕೆ ಬಂದಿಲ್ಲ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಯೋಜನೆಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಉಪಾಧ್ಯಕ್ಷರಾದ ಜೋಕಿಂ ಡಿ.ಸೋಜ, ನಾರಾಯಣ ನಾಯ್ಕ, ಸುರೇಖಾ, ಬಂಟ್ವಾಳ ಪುರಸಭೆ ಅಧ್ಯಕ್ಷ ಬಿ. ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್, ಜಿ.ಪಂ. ಉಪ ಕಾರ್ಯದರ್ಶಿ ಕೆ.ಇ.ಜಯರಾಮ್, ಸಿಡಿಪಿಒ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್, ಜಿಲ್ಲಾ ಮಟ್ಟದ ಅಧಿಕಾರಿಗಳಾದ ಆನಂದ, ವೈ.ಎಂ.ಬಡಿಗೇರ್, ತಾ.ಪಂ.ಕಾರ್ಯ ನಿರ್ವಹ ಣಾಧಿಕಾರಿ ಸಚಿನ್ ಕುಮಾರ್, ಕೆ.ಎಸ್.ಆರ್.ಟಿ.ಸಿ. ನಿಗಮ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ರಾಮಲಿಂಗಯ್ಯ, ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಮೆಸ್ಕಾಂ ಅಧಿಕಾರಿ ವೆಂಕಟೇಶ್ ಜಿ.ಎಚ್. ತಾಲೂಕು ಸಮಿತಿಗಳ ಅಧ್ಯಕ್ಷರುಗಳಾದ ಸುದೀರ್ ಕುಮಾರ್, ಉಮಾನಾಥ ಶೆಟ್ಟಿ, ಸಾಹುಲ್ ಹಮೀದ್, ಪದ್ಮನಾಭ ಸಾಲಿಯಾನ್, ಹಾಗೂ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ರಾದ ಸಿರಾಜ್ ಮದಕ, ಮಜೀದ್ ಕನ್ಯಾನ, ಹೈಡಾ ಸುರೇಶ್, ಕಾಂಚಲಾಕ್ಷಿ, ಪವಿತ್ರ ಪೂಂಜಾ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಸರಕಾರಿ ಬಸ್ ಪ್ರಯಾಣಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು. ಇಬ್ಬರು ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಯಿತು. ಯೋಜನೆಗಳ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಪ್ರಸ್ತಾವನೆಗೈದರು, ಸದಸ್ಯ ವಿನಯ ಕುಮಾರ್ ಸಿಂದ್ಯಾ ಸ್ವಾಗತಿಸಿ, ಸುಧೀಂದ್ರ ಶೆಟ್ಟಿ ಇರ್ವತ್ತೂರು ವಂದಿಸಿದರು. ಸಂಶುದ್ದೀನ್ ಅಜ್ಜಿನಡ್ಕ ಹಾಗೂ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.