ಪಿಂಗಾರದಿಂದ 24ನೆ ಸಾಹಿತ್ಯೋತ್ಸವ

ಮಣಿಪಾಲ, ಮಾ.17: ಪಿಂಗಾರ ವತಿಯಿಂದ ಮಣಿಪಾಲದ ಮೂರನೇ ಅಡ್ಡ ರಸ್ತೆಯ ದಶರಥನಗರ ಬಡಾವಣೆಯ ಆ್ಯಂಟನಿ ಲೂಯಿಸ್‌ರ ಅಂಗಳದಲ್ಲಿ 24ನೇ ಪಿಂಗಾರ ಸಾಹಿತ್ಯೋತ್ಸವ ಹಾಗೂ ಪಂಚಭಾಷಾ ಕವಿಗೋಷ್ಠಿ ನಡೆಯಿತು.
ಸಾಹಿತಿ ಡಾ. ಸುರೇಶ ನೆಗಳಗುಳಿ ಗಝಲ್ ವಾಚಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಮಯದಲ್ಲಿ ಸಾಹಿತಿಗಳು ಗೂಗಲ್ ಬ್ಲಾಗ್,ಗೂಗಲ್ ಟೈಪ್ ,ಸಾಹಿತ್ಯ ಉಳಿಸಿಕೊಳ್ಳಲು ವಿವಿಧ ಮೊಬೈಲ್ ಟೂಲ್ ಕವಿ , ಕಾರ್ಯಕ್ರಮದ ಸಂಘಟಕ, ಸಾಹಿತಿ ರೇಮಂಡ್ ಡಿಕುನ್ಹ ತಾಕೊಡೆ ಇಂಗ್ಲಿಷ್, ತುಳು, ಕೊಂಕಣಿ, ಕನ್ನಡ ಭಾಷೆಯಲ್ಲಿ ಬರೆದ ವಿವಿಧ ಚುಟುಕುಗಳನ್ನು ವಾಚಿಸಿದರು.
ಕವಿಗಳಾದ ಆ್ಯಂಟನಿ ಲೂಯಿಸ್, ದಿಯಾ ಉದಯ್ ಡಿಯು, ಪ್ರೇಮಾ ಆರ್. ಶೆಟ್ಟಿ, ಮಾಲತಿ ರಮೇಶ್ ಕೆಮ್ಮಣ್ಣು, ಅವಿನಾಶ್ ಐತಾಳ್, ವಾಣಿಶ್ರೀ ತೆಕ್ಕಟ್ಟೆ, ಸುಮಾಕಿರಣ್ ಮಣಿಪಾಲ, ವಿನೋದ ಪ್ರಕಾಶ್ ಪಡುಬಿದ್ರಿ, ರೇಖಾ ಸುರೇಶ್ ಮಂಗಳೂರು ಕವಿತೆಗಳನ್ನು ವಾಚಿಸಿದರು. ಜ್ಯೋತಿ ಆ್ಯಂಟನಿ ಲೂಯಿಸ್ ವಂದಿಸಿದರು.
Next Story