ನ. 29ರಂದು ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಮಂಗಳೂರು: ರಾಜ್ಯಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಯು.ನಿಸಾರ್ ಅಹಮದ್ ಅವರು ನ. 29ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ನ. 29ರ ಬೆಳಗ್ಗೆ 10:15ಕ್ಕೆ ಮಂಗಳೂರಿಗೆ ಆಗಮನ, ಬೆಳಿಗ್ಗೆ 11ಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ,ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ. ಮಧ್ಯಾಹ್ನ 3:30ಕ್ಕೆ ಸುಳ್ಯದಲ್ಲಿ ಅನ್ಸಾರಿಯಾ ಶೈಕ್ಷಣಿಕ ಕೇಂದ್ರ ಮತ್ತು ಅನಾಥಾಶ್ರಮದ ಆವರಣದಲ್ಲಿ ಶಾದಿ ಮಹಲ್ ಉದ್ಘಾಟನಾ ಸಮಾರಂಭ, ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ, ನ. 30ರಂದು ಬೆಳಗ್ಗೆ 10.05ಕ್ಕೆ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story