ನ. 4ರಂದು ಮಿಸ್ಕೀನ್ ಎಂಪವರ್ಮೆಂಟ್ ಫೌಂಡೇಶನ್ ದಶಮಾನೋತ್ಸವ
ಕಾಪುವಿಗೆ ಸಿರಾಜುದ್ದೀನ್ ಖಾಸಿಮಿ ಭೇಟಿ
ಕಾಪು : ಕಾಪು-ಪೊಲಿಪು ಜಾಮಿಯಾ ಮಸೀದಿಯ ಜಮಾಅತ್ಗೆ ಒಳಪಟ್ಟ ಮಿಸ್ಕೀನ್ ಎಂಪವರ್ಮೆಂಟ್ ಫೌಂಡೇಶನ್ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ನ. 4ರಂದು ಸಂಜೆ 6ಗಂಟೆಗೆ ಕಾಪುವಿನ ಮಜೂರು ಸರ್ಕಲ್ ಬಳಿಯ ಖಾಸಗಿ ಮೈದಾನದಲ್ಲಿ ಜರಗಲಿದೆ.
ಶನಿವಾರ ಕಾಪು ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಲಹೆಗಾರರಾದ ಅಮೀರ್ ಹಂಝ ಮಾಹಿತಿ ನೀಡಿದರು.
ಮಿಸ್ಕೀನ್ ಎಂಪವರ್ ಮೆಂಟ್ ಫೌಂಡೇಶನ್ ಕಳೆದ 10 ವರ್ಷಗಳಿಂದ, ಸಮುದಾಯದ ಬಡವರ್ಗದವರ ಸಂಪೂರ್ಣ ಸಬಲೀಕರಣಕ್ಕಾಗಿ ರೂಪುಗೊಂಡ ಸಂಸ್ಥೆಯಾಗಿ ಸಾಂಧರ್ಭಿಕ ಅವಶ್ಯಕತೆಗಳ ನಿವಾರಣೆಗಳನ್ನು ಮಾತ್ರ ಮಾಡದೇ, ಶಾಶ್ವತವಾದ ಪರಿಹಾರವನ್ನು ನೀಡುವ ಸಂಸ್ಥೆಯಾಗಿರುತ್ತದೆ. ದಶಮಾನೋತ್ಸವದ ಪ್ರಯುಕ್ತ ಏಕ ದಿನ ಮತ ಪ್ರಭಾಷಣ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೊಲಿಪು ಜಾಮಿಯಾ ಮಸೀದಿಯ ಖತೀಬ್ ಮುಹಮ್ಮದ್ ಇರ್ಷಾದ್ ಸಅದಿ ಉದ್ಘಾಟಿಸಲಿದ್ದಾರೆ. ಕಾಪು ಖಾಝಿ ಅಲ್ಹಾಜ್ ಪಿ.ಬಿ. ಅಹಮ್ಮದ್ ಮುಸ್ಲಿಯಾರ್ ದುಅ ನೆರವೇರಿಸಲಿದ್ದು, ಅಂತರ್ ರಾಷ್ಟ್ರೀಯ ವಾಗ್ಮಿ ಅಲ್ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂರವರು ಮತ ಪ್ರಭಾಷಣವನ್ನು ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ನಝೀರ್ ಕೆ.ಹಸನ್, ಕಾರ್ಯದರ್ಶಿ ಮುಹಮ್ಮದ್ ಮಹ್ಸೂಲ್ ಅಮೀರ್, ಇಮ್ತಿಯಾಝ್ ಅಹ್ಮದ್, ಸರ್ಫರಾಝ್ ಚಪ್ಪು ಉಪಸ್ಥಿತರಿದ್ದರು.