ಕಾಟಿಪಳ್ಳ ಸರಕಾರಿ ಶಾಲೆಯ 60ನೇ ವಾರ್ಷಿಕೋತ್ಸವ
ಮಂಗಳೂರು, ಡಿ.24: ಕಾಟಿಪಳ್ಳ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ವಿಕಾಸ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ 60 ನೇ ವಾರ್ಷಿಕೋತ್ಸವ ಸಮಾರಂಭ, ಎಂಆರ್ಪಿಎಲ್ನ ಸಿಎಸ್ಆರ್ ಅನುದಾನದಿಂದ ನವೀಕರಣಗೊಂಡ ಶಾಲಾ ಕಟ್ಟಡದ ಉದ್ಘಾಟನೆ, ಹಾಗೂ ವಿಕಾಸ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಶಾಲಾ ಆವರಣದಲ್ಲಿ ಶನಿವಾರ ನಡೆಯಿತು.
ಕಾಟಿಪಳ್ಳ 3 ನೇ ವಾರ್ಡಿನ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ನವೀಕೃತ ಕಟ್ಟಡ ಹಾಗೂ ವಿಕಾಸ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿದರು.
ಗಣೇಶ್ಪುರ ಶ್ರೀ ಕ್ಷೇತ್ರ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಧರ್ಮೇಂದ್ರ, ಕಾಟಿಪಳ್ಳ ಇನ್ಫಾಂಟ್ ಮೇರಿ ಚರ್ಚ್ನ ಧರ್ಮಗುರು ವಂ. ಸಂತೋಷ್ ಲೋಬೊ, ಕಾಟಿಪಳ್ಳ ನೂರುಲ್ ಹುದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು, ಗಣೇಶ್ ಪುರ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯ ಕುಮಾರ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮುಹಮ್ಮದ್ ಸಮೀರ್, ಹಳೆ ವಿದ್ಯಾರ್ಥಿ ಸಂಘ ದ.ಕ. ಜಿ.ಪಂ ಹಿ.ಪ್ರಾ.ಶಾಲೆ 3 ನೇ ವಿಭಾಗ ಕಾಟಿಪಳ್ಳ ಇದರ ಅಧ್ಯಕ್ಷ ಸತೀಶ್ ಆಚಾರ್ಯ, ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಕೆಎಂವೈಎ ದಮಾಮ್ ಘಟಕದ ಅಧ್ಯಕ್ಷ ಮುಸ್ತಫ, ಬದ್ರುದ್ದೀನ್ ನ್ಯೂ ಪಿಂಚ್, ಸಿವೈಸಿ ಗ್ಲೋಬಲ್ ಸದಸ್ಯ ಅನ್ಸಾರ್ ಕಾಟಿಪಳ್ಳ, ಆದರ್ಶ್ ಯುವಕ ಮಂಡಲದ ಕಾಟಿಪಳ್ಳ ಇದರ ಅಧ್ಯಕ್ಷ ಶಶಿಧರ್ ದೇವಾಡಿಗ, ರಿಲಯನ್ಸ್ ಯೂತ್ ಅಸೋಸಿಯೇಷನ್ನ ಅಧ್ಯಕ್ಷ ಮುಹಮ್ಮದ್ ವಾಸಿಮ್, ಆಝಾದ್ ಫೌಂಡೇಶನ್ ಕಾಟಿಪಳ್ಳ ಅಧ್ಯಕ್ಷ ಶಂಶೀರ್, ಕೆವೈಸಿಯ ಅಧ್ಯಕ್ಷ ಶರೀಫ್ ಐಡಿಯಲ್, ಕೇಸರಿ ಫ್ರೆಂಡ್ಸ್ ನ ಅಧ್ಯಕ್ಷ ರಾಕೇಶ್, ಬದ್ರಿಯಾ ಯೂತ್ ಕೌನ್ಸಿಲ್ನ ಅಧ್ಯಕ್ಷ ಮುಸ್ತಫ ರೂಬಿ, ಮೂನ್ ಲೈಟ್ ಯೂತ್ ಕೌನ್ಸಿಲ್ನ ಅಧ್ಯಕ್ಷ ನವಾಝ್ ರೂಬಿ, ಇಲೆವೆನ್ ಸ್ಟಾರ್ ಕಾಟಿಪಳ್ಳ ಇದರ ಗೌರವಾಧ್ಯಕ್ಷ ಪಿ.ಇ.ಅಹ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಅನಂತ್ ರಾಮ್ ರಾವ್ ಹಾಗೂ ವಿಕಾಸ ಹಳೆ ಸಂಘದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಶಿಕ್ಷಕ ದಿನೇಶ್ ಶೇಟ್ ಹಾಗೂ ವಿಕಾಸ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ಪಕ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.