ಇಂದಿನಿಂದ 752ನೇ ಅಜಿಲಮೊಗರು ಮಾಲಿದಾ ಉರೂಸ್
ಬಂಟ್ವಾಳ : ಇತಿಹಾಸ ಪ್ರಸಿದ್ಧ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 752 ನೇ ಮಾಲಿದಾ ಉರೂಸ್ ಇಂದಿನಿಂದ ಆರಂಭಗೊಂಡಿದೆ.
ಡಿ. 14 ರಂದು ಬೆಳಿಗ್ಗೆ 8 ರಿಂದ ರಾತ್ರಿ 11 ರ ತನಕ ಭಂಡಾರದ ಹರಕೆ, ರಾತ್ರಿ 8 ರಿಂದ 11 ರ ತನಕ ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್, ಡಿ.15 ರಂದು ಮಾಲಿದಾ ಉರೂಸ್, ಸಂಜೆ 7 ರಿಂದ ಧಾರ್ಮಿಕ ಪ್ರವಚನ, ಡಿ.16 ರಂದು ಬೆಳಗ್ಗೆ 8 ರಿಂದ ಮಾಲಿದಾ ವಿತರಣೆ, ಸಂಜೆ 7 ರಿಂದ ಧಾರ್ಮಿಕ ಪ್ರವಚನ, ಡಿ.17 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರ ತನಕ ಕಂದೂರಿ ಊಟ ನಡೆಯಲಿದೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.
Next Story