ಬೆಂಗ್ರೆಯಲ್ಲಿ ಭಾರಿ ಗಾಳಿ; 8 ಮನೆಗಳಿಗೆ ಹಾನಿ
ಮಂಗಳೂರು: ಕಸ್ಬಾ ಬೆಂಗ್ರೆಯಲ್ಲಿ ಶುಕ್ರವಾರ ಸಂಜೆ ಬೀಸಿದ ಭಾರಿ ಗಾಳಿ ಮಳೆಗೆ ಹಲವು ಮನೆಗಳಿಗೆ ಅಪಾರ ಹಾನಿಯಾ ಗಿದೆ ಮನೆಯ ಗಾಳಿಗೆ ಮನೆ ಛಾವಣಿಯ ಹೆಂಚು, ಶೀಟ್ಗಳು ಹಾರಿ ಹೋಗಿದೆ.
ಅಲ್ತಾಫ್, ಅಶ್ರಫ್, ಲತೀಫ್, ಇಂತಿಯಾಝ್, ಫಾರೂಕ್, ದಾವೂದ್ ಸೇರಿದಂತೆ 8 ಮಂದಿಯ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸ್ಥಳೀಯ ಕಾರ್ಪೊರೇಟರ್ ಮುನೀಬ್ ಬೆಂಗ್ರೆ ಒತ್ತಾಯಿಸಿದರು. ಬೆಂಗ್ರೆ ಜಮಾಅತ್ನ ಅಧ್ಯಕ್ಷ ಬಿಲಾಲ್ ಮೊಯ್ದೀನ್ ಎಸ್ಡಿಪಿ ವಾರ್ಡ್ ಅಧ್ಯಕ್ಷ ಮುಝೈನ್ ಐಬಿಎಂ ಕಾಂಗ್ರೆಸ್ ಧುರೀಣ ಇಮ್ರಾನ್ ಬೆಂಗ್ರೆ ಡಿವೈಎಫ್ಐ ಮುಖಂಡ ತಯ್ಯೂಬ್ ಹಾಗೂ ಹಲವು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Next Story