ಮಂಗಳೂರು: ಸಿಟಿ ಗೋಲ್ಡ್ನಲ್ಲಿ THE HOPE ವಜ್ರಾಭರಣ ಮಾರಾಟ ಮೇಳ ಆರಂಭ
ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಚಿನ್ನ ಮತ್ತು ವಜ್ರಾಭರಣ ಮಳಿಗೆ ಸಿಟಿ ಗೋಲ್ಡ್ನಲ್ಲಿ THE HOPE ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವು ಸೋಮವಾರ ಆರಂಭಗೊಂಡಿದ್ದು, ಡಿ.31ರವರೆಗೆ ನಡೆಯಲಿದೆ. ದೇಶ, ವಿದೇಶಗಳ ವಜ್ರಾಭರಣ ಪ್ರದರ್ಶನವೂ ಇದೆ.
ಮೇಕಪ್ ಕಲಾವಿದರಾದ ಅಜ್ಮಿ ಹಾಗೂ ಸಾಜಿದಾ ಹಾರಿಸ್ ಮಾರಾಟ ಮೇಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಅಸಿಸ್ಟೆಂಟ್ ಮ್ಯಾನೇಜರ್ ಅಬ್ದುಲ್ ಅಝೀಝ್, ಸೇಲ್ಸ್ ಮ್ಯಾನೇಜರ್ ಇಮ್ರಾನ್ ವಿ., ಮಾರ್ಕೆಟಿಂಗ್ ಮ್ಯಾನೇಜರ್ ಜುನೈದ್ ಮತ್ತಿತರರು ಉಪಸ್ಥಿತರಿದ್ದರು.
THE HOPE ವಜ್ರಾಭರಣ ಪ್ರದರ್ಶನ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯಲ್ಲಿ ಒಂದು ಕ್ಯಾರೆಟ್ಗೆ 14000 ರೂ. ರಿಯಾಯಿತಿ ನೀಡಲಾಗುವುದು. ಇತರೆ ಬ್ರಾಂಡ್ನ ವಜ್ರಾಭರಣವನ್ನು ಉತ್ತಮ ದರದೊಂದಿಗೆ ವಿನಿಮಯ ಮಾಡಿಕೊಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story