ಜ.14: ಕುಂಬ್ರದಲ್ಲಿ ಕೋಟುಮಲ ಬಾಪು ಮುಸ್ಲಿಯಾರ್ ರಾಷ್ಟ್ರೀಯ ವಿಚಾರ ಸಂಕಿರಣ
ಪುತ್ತೂರು, ಜ.13: ಕನ್ನಡ ರಹ್ಮಾನಿಗಳ ಒಕ್ಕೂಟ ‘ರಹ್ಮ’ ವತಿಯಿಂದ ಕುಂಬ್ರ ಕೆಐಸಿಯಲ್ಲಿ ಜ.14ರಂದು ಬೆಳಗ್ಗೆ 9:30ರಿಂದ 3ರ ತನಕ ‘ಕೋಟುಮಲ ಬಾಪು ಮುಸ್ಲಿಯಾರ್: ಬಹುಮುಖ ಅಧ್ಯಯನ’ ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಸಮಾರಂಭದಲ್ಲಿ ‘ರಹ್ಮ’ ಕನ್ನಡ ರಹ್ಮಾನಿಗಳ ಒಕ್ಕೂಟದ ಅಧ್ಯಕ್ಷ ಸಯ್ಯಿದ್ ಅಕ್ರಂ ಅಲಿ ತಂಳ್ ರಹ್ಮಾನಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಜಾಮಿಯ ರಹ್ಮಾನಿಯ್ಯ ಅಕಾಡೆಮಿಕ್ ನಿರ್ದೇಶಕ ಉಸ್ತಾದ್ ಬಶೀರ್ ಫೈಝಿ ಚೀಕೋನ್ , ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಬಾಪು ಉಸ್ತಾದ್ ಬಗೆಗಿನ ವಿವಿಧ ವಿಷಯಗಳ ಅಧ್ಯಯನಾತ್ಮಕ ಪ್ರಬಂಧಗಳ ಮಂಡನೆ ನಡೆಯಲಿದೆ.
ಡಾ. ಶಫೀಖ್ ರಹ್ಮಾನಿ ಅವರು ಸೆಮಿನಾರ್ ಮಾಡರೇಟರ್ ಆಗಿರುತ್ತಾರೆ.
ಅನೀಸ್ ಕೌಸರಿ, ಶಾಜಹಾನ್ ರಹ್ಮಾನಿ, ಅಶ್ರಫ್ ರಹ್ಮಾನಿ ಚೌಕಿ, ಸಯ್ಯದ್ ಅಕ್ರಮ್ ಅಲಿ ತಂಳ್, ತಾಜುದ್ದೀನ್ ರಹ್ಮಾನಿ, ಅಹ್ಮದ್ ನಯೀಮ್ ಫೈಝಿ ಮುಕ್ವೆ, ಮುಹಮ್ಮದ್ ಶಾಹಿಮ್, ಮುಹಮ್ಮದ್ ಮನ್ಸೂರ್, ಸಫ್ವಾನ್ ವೆಂಗಪಳ್ಳಿ, ಅಹ್ಮದ್ ಸುನೈಫ್, ಅಹ್ಮದ್ ಹಾಜಿ ಆಕರ್ಷಣ್ ಸಹಿತ ವಿವಿಧ ಗಣ್ಯರು ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.