ನ.16ರಂದು ನಿಟ್ಟೆ ವಿಶ್ವವಿದ್ಯಾನಿಲಯದ 14ನೇ ಘಟಿಕೋತ್ಸವ: 1052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮಂಗಳೂರು, ನ.13: ನಿಟ್ಟೆ ವಿಶ್ವವಿದ್ಯಾನಿಲಯದ 14ನೇ ಘಟಿಕೋತ್ಸವ ಸಮಾರಂಭವು ನ.16ರಂದು ಅಪರಾಹ್ನ 3 ಗಂಟೆಗೆ ದೇರಳಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯದ ಆವರಣದ ಮೈದಾನದಲ್ಲಿ ಜರುಗಲಿದೆ ಎಂದು ವಿವಿಯ ಉಪ ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸೇನಾಪಡೆಗಳ ವೈದ್ಯಕೀಯ ಸೇವೆಗಳ ಡೈರೆಕ್ಟರ್ ಜನರಲ್ ಡಾ.ಅರ್ತಿ ಸರಿನ್ ಸಮಾರಂಭದ ಮುಖ್ಯ ಭಾಷಣ ಮಾಡಲಿದ್ದಾರೆ. ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು.
ಸೇನಾಪಡೆಗಳ ವೈದ್ಯಕೀಯ ಸೇವೆಗಳ ಡೈರೆಕ್ಟರ್ ಜನರಲ್ ಡಾ.ಅರ್ತಿ ಸರಿನ್ ಸಮಾರಂಭದ ಮುಖ್ಯ ಭಾಷಣ ಮಾಡಲಿದ್ದಾರೆ. ಸಹ ಕುಲಾಧಿಪತಿಗಳಾದ ಪ್ರೊ.ಡಾ.ಎಂ.ಶಾಂತಾರಾಂ ಶೆಟ್ಟಿ, ವಿಶಾಲ್ ಹೆಗ್ಡೆ ಉಪಸ್ಥಿತರಿರುವರು.
ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಸ್ವಾಗತ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾನಿಲಯದ ಇತರ ಪ್ರಮುಖ ಅಧಿಕಾರಿಗಳಾದ ಪ್ರೊ.ಡಾ.ಹರ್ಷ ಹಾಲಹಳ್ಳಿ, ಪ್ರೊ.ಡಾ.ಪ್ರಸಾದ್ ಬಿ. ಶೆಟ್ಟಿ, ಪರೀಕ್ಷಾ ನಿಯಂತ್ರಕರು ,ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
* 1052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ಒಟ್ಟು 1,052 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಪೈಕಿ ಪಿ.ಎಚ್.ಡಿ.-34, ವೈದ್ಯಕೀಯ-163 (ಪಿಜಿ-15+ಯುಜಿ-148), ದಂತ ವೈದ್ಯಕೀಯ-147 (ಫೆಲೋಶಿಪ್- 1+ ಪಿಜಿ- 49+97), 3-209 (23-107+aw-102), Fon-143 (83-05+adwa-138), ಫಿಸಿಯೋಥೆರಪಿ-85 (ಪಿಜಿ-30+ಯುಜಿ-55), ಅರೆ ವೈದ್ಯಕೀಯ ವಿಜ್ಞಾನ -146 (ಪಿಜಿ-42+ಯುಜಿ-104), ಮಾನವಿಕ-14 (ಪಿಜಿ-11+ ಯುಜಿ-03), ಜೈವಿಕ ವಿಜ್ಞಾನ -49 (ಪಿಜಿ-45 +ಯುಜಿ-04), ವಾಸ್ತುಶಿಲ್ಪ -41 (ಯುಜಿ), ವಾಕ್ ಮತ್ತು ಶ್ರವಣ –15 (ಪಿಜಿ) ಮತ್ತು ವ್ಯವಹಾರ ನಿರ್ವಹಣೆ –06 (ಪಿಜಿ-06).
ಶೈಕ್ಷಣಿಕ ಶ್ರೇಷ್ಠತೆಗೆ ಗೌರವ ನೀಡುವುದಕ್ಕಾಗಿ, ವಿಶ್ವವಿದ್ಯಾನಿಲಯವು 22 ಚಿನ್ನದ ಪದಕಗಳು (11 ನಿಟ್ಟೆವಿಶ್ವವಿದ್ಯಾನಿಲಯ ಚಿನ್ನದ ಪದಕಗಳು ಮತ್ತು ಒಂದು ದತ್ತಿ ಚಿನ್ನದ ಪದಕ) ಹಾಗೂ 72 ಮೆರಿಟ್ ಪ್ರಮಾಣಪತ್ರಗಳನ್ನು ಪ್ರಶಸ್ತಿಯಾಗಿ ನೀಡಲಿದೆ ಎಂದವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ರಿಜಿಸ್ಟ್ರಾರ್ ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಡಾ.ಪ್ರಸಾದ್ ಬಿ. ಶೆಟ್ಟಿ ಉಪಸ್ಥಿತರಿದ್ದರು.