ಡಿ.15: ಮಲಾರ್ನಲ್ಲಿ ನೂತನ ವಸತಿ ಕಟ್ಟಡ ಉದ್ಘಾಟನೆ
ಕೊಣಾಜೆ, ಡಿ.14: ಮಲಾರ್ ಹರೇಕಳ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ವತಿಯಿಂದ ನಿರ್ಮಿಸಲಾದ ನೂತನ ವಸತಿ ಕಟ್ಟಡದ ಉದ್ಘಾಟನೆ ಮತ್ತು ಮತಪ್ರವಚನ ಕಾರ್ಯಕ್ರಮವು ಡಿ.15ರಂದು ರಾತ್ರಿ 7ಕ್ಕೆ ಮಲಾರ್ ಮೈದಾನದಲ್ಲಿ ನಡೆಯಲಿದೆ.
ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಅಸೈಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಳ್ ವಸತಿ ಕಟ್ಟಡ ಉದ್ಘಾಟಿಸಲಿ ದ್ದಾರೆ. ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಎಂಜೆಎಂ ಖತೀಬ್ ಸೈಫುಲ್ಲಾ ಬಾಖವಿ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಸೀದಿಯ ಅಧ್ಯಕ್ಷ ಹಾಜಿ ಎಸ್.ಎಂ. ಆಸೀಫ್ ಇಕ್ಬಾಲ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story