ಡಿ.20: ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪ
ಮಂಗಳೂರು, ಡಿ.18: ಯುನಿವೆಫ್ ಕರ್ನಾಟಕ ವತಿಯಿಂದ ಕೈಗೊಳ್ಳಲಾದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪ ಸಮಾರಂಭ ಡಿ.20ರಂದು ಸಂಜೆ 6:45ಕ್ಕೆ ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಯುನಿವೆಫ್ ಕರ್ನಾಟಕ ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ತಿಳಿಸಿದ್ದಾರೆ.
ಮಂಗಳೂರು ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾದಿ ಸಂದೇಶ ಪ್ರಚಾರದ ಅಭಿಯಾನ ಸೆ.20ರಂದು ಆರಂಭಗೊಂಡಿತ್ತು ಎಂದು ಮಾಹಿತಿ ನೀಡಿದರು.
ಸಮಾರೋಪ ಸಮಾರೋಪ ಸಮಾರಂಭದಲ್ಲಿ ಬಿಜಾಪುರ ವಿರಕ್ತ ಮಠದ ಶ್ರೀ ಮ.ನಿ.ಪ್ರ.ವಿರತೀಶಾನಂದ ಸ್ವಾಮೀಜಿ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಖಜಾಂಚಿ ಪದ್ಮರಾಜ್ ಆರ್ ಪೂಜಾರಿ, ಹಾಗೂ ಸಂತ ಅಲೋಶಿಯಸ್ ಸ್ವಾಯತ್ತ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಅಲ್ವಿನ್ ಡೆಸಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
‘ಮಾನವ ಸ್ವಾತಂತ್ರ್ಯ , ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ರಿ) ಎಂಬ ವಿಷಯದಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಯನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ವಹಿಸಲಿರುವರು. ಅಭಿಯಾನ ಸಂಚಾಲಕ ಬ್ರದರ್ ವಕಾಝ್ ಅರ್ಶಲಾನ್ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಸೈಫುದ್ದೀನ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಹ ಸಂಚಾಲಕರಾದ ಮುಹಮ್ಮದ್ ಆಸಿಫ್ ಮತ್ತು ಉಬೈದುಲ್ಲಾ ಬಂಟ್ವಾಳ, ಉತ್ತರ ವಿಭಾಗ ವಲಯ ಸಂಚಾಲಕ ನೌಫಲ್ ಹಸನ್, ಯುನಿವೆಫ್ ಕುದ್ರೋಳಿ ಶಾಖೆಯ ಸದಸ್ಯರಾದ ಸಯೀದ್ ಅಹ್ಮದ್ ಮತ್ತು ಶೇಖ್ ಅಹ್ಮದ್ , ಮಂಗಳೂರು ಶಾಖೆಯ ಹಿರಿಯ ಸದಸ್ಯ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.