ನ.23, 24ರಂದು ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕಾರ್ಯಾಗಾರ
ಮಂಗಳೂರು: ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ‘ಶಿಶು ಮತ್ತು ಮಕ್ಕಳ ಶಾಸ್ತ್ರ’ ವಿಭಾಗದ ಆಶ್ರಯದಲ್ಲಿ ಮಕ್ಕಳ ಅಂತ:ಸ್ರಾವದ (ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ) ಬಗ್ಗೆ ರಾಜ್ಯ ಮಟ್ಟದ 2 ದಿನಗಳ ವೈದ್ಯಕೀಯ ಕಾರ್ಯಾಗಾರ ನ.23 ಮತ್ತು 24 ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಕಾರ್ಯಾಗಾರವನ್ನು ಉದ್ಘಾಟಿಸಲಿರುವರು. ಖ್ಯಾತ ಮತ್ತು ನುರಿತ ಶಿಶು ಮತ್ತು ಮಕ್ಕಳ ಶಾಸ್ತ್ರ ತಜ್ಞರು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳಲ್ಲಿ ಕಾಣುವ ಮಧುಮೇಹ ಮತ್ತು ವಿವಿಧ ರೋಗಗಳ ಕಾರಣ, ಲಕ್ಷಣ ಮತ್ತು ಚಿಕಿತ್ಸಾ ಕ್ರಮದ ಬಗ್ಗೆ ಹಾಗೂ ವಿಶೇಷವಾಗಿ ನವಜಾತ ಶಿಶುಗಳಲ್ಲಿ ಕಂಡುಬರುವ ಜನ್ಮಜಾತ ದೋಷ ಮತ್ತು ಉಪಶಮನಗಳ ಬಗ್ಗೆ ಮಾಹಿತಿ ನೀಡಲಿರುವರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್, ಸಂಸ್ಥೆಯ ಪ್ರಾಂಶುಪಾಲ ಡಾ. ಶಹನವಾಜ್ ಮಣಿಪ್ಪಾಡಿ, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಮುಖ್ಯ ಸಲಹೆಗಾರರಾದ ಡಾ.ಮೊಹಮ್ಮದ್ ಇಸ್ಮಾಯಿಲ್ ಮತ್ತು ಸಲಹಾ ಸಮಿತಿಯ ಸದಸ್ಯ ಡಾ. ಎಂ. ವಿ. ಪ್ರಭು ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್ ಹಾಗೂ ಈ ವೈದ್ಯಕೀಯ ಕಾರ್ಯದಲ್ಲಿ ರಾಜ್ಯದಿಂದ ಸುಮಾರು 150 ವೈದ್ಯಕೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ಸಂಘಟನಾ ಅಧ್ಯಕ್ಷ ಡಾ.ಓನಿಲ್ ಫೆರ್ನಾಂಡೀಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.