ಅ.3: ಬ್ಯಾರಿ ಭಾಷಾ ದಿನಾಚರಣೆ
ಮಂಗಳೂರು: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ವತಿಯಿಂದ ಅ.3ರ ಸಂಜೆ 4ಕ್ಕೆ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ನಗರದ ಫಿಝಾ ಬೈ ನೆಕ್ಸಸ್ ಮಾಲ್ನಲ್ಲಿ ನಡೆಯಲಿದೆ.
ಜಿಲ್ಲೆಯ ಗಾಯಕರಿಂದ ಬ್ಯಾರಿ ಖವ್ವಾಲಿ, ಬ್ಯಾರಿ ಗೀತೆಗಳು, ಬ್ಯಾರಿ ಗಝಲ್, ಬ್ಯಾರಿ ಶಾಯರಿ, ಚುಟುಕು, ಒಗಟು, ಗಾದೆ, ನೀತಿ ಬೋಧಕ ಪ್ರಹಸನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿದೆ ಎಂದು ಸಂಘದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story