ಜ.3-4: ನೀರು ಪೂರೈಕೆಯಲ್ಲಿ ವ್ಯತ್ಯಯ
ಮಂಗಳೂರು: ತುಂಬೆ, ಬೆಂದೂರ್ವೆಲ್, ಪಣಂಬೂರು ಮುಖ್ಯ ಕೊಳವೆಯಲ್ಲಿ ದುರಸ್ತಿ ಪಡಿಸಲಿರುವ ಕಾರಣ ಜ.3ರ ಬೆಳಗ್ಗೆ 6ರಿಂದ ಜ.4ರ ಬೆಳಗ್ಗೆ 6ರವರೆಗೆ ಮನಪಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರದ ಬಂದರ್, ಪಿವಿಎಸ್, ಲೇಡಿಹಿಲ್, ಮೇರಿಹಿಲ್, ಜಲ್ಲಿಗುಡ್ಡೆ ಪಚ್ಚನಾಡಿ, ಅಶೋಕನಗರ, ದೇರೇಬೈಲ್, ಕೋಡಿ ಯಾಲ್ ಬೈಲ್, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಕೋಡಿಕಲ್, ಕಾನ, ಬಾಳ, ಕುಳಾಯಿ, ಪಣಂಬೂರು, ಮುಲ್ಕಿ ಭಾಗಗಳಲ್ಲಿ ನೀರು ಪೂರೈಕೆಯಾಗುವುದಿಲ್ಲ ಎಂದು ಮನಪಾ ಪ್ರಕಟನೆಯಲ್ಲಿ ತಿಳಿಸಿದೆ.
Next Story