ಮಂಗಳೂರು ವಿಮಾನ ನಿಲ್ದಾಣದಲ್ಲಿ 46.52 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ
ಮಂಗಳೂರು, ಸೆ.26: ಪ್ರತ್ಯೇಕ ಪ್ರಕರಣಗಳಲ್ಲಿ ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 46.52 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ.23 ಮತ್ತು 24ರಂದು ಪತ್ತೆಹಚ್ಚಿ ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
5 ಮಂದಿ ಪ್ರಯಾಣಿಕರು 24 ಕ್ಯಾರೆಟ್ನ ಒಟ್ಟು 775 ಗ್ರಾಂ ಚಿನ್ನವನ್ನು ಒಳ ಉಡುಪು, ಏರ್ಪೋಡ್ಸ್ ಮತ್ತು ಟ್ರಾಲಿಬ್ಯಾಗ್ನ ರಾಡ್ಗಳಲ್ಲಿ ಅಂಟಿಸಿ ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story