ಮಾ.9-10ರಂದು ಮಂಗಳೂರಿನಲ್ಲಿ ‘ರಿಯಾಲ್ಟಿ ಎಕ್ಸ್ ಪೋ’

ಮಂಗಳೂರು: ಕ್ರೆಡೈ ಮಂಗಳೂರು ವತಿಯಿಂದ 2024ರ ಮಾರ್ಚ್ 9 ಮತ್ತು 10ರಂದು ಎರಡು ದಿನಗಳ ಕಾಲ ಬೃಹತ್ ಮಟ್ಟದ ‘ರಿಯಾಲ್ಟಿ ಎಕ್ಸ್‌ಪೋ’ ಆಯೋಜಿಸಲಾಗಿದೆ ಎಂದು ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಅವರು, 50ಕ್ಕೂ ಹೆಚ್ಚು ಉದ್ಯಮಿಗಳು, ವಿವಿಧ ಉದ್ಯಮ ಸಂಸ್ಥೆಗಳು ಸೇರಿಕೊಂಡು ಈ ಎಕ್ಸ್ ಪೋ ಆಯೋಜನೆ ಮಾಡಲು ನಿರ್ಧರಿಸಿದೆ. ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಎಕ್ಸ್‌ಪೋ ದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಲಕ್ಸುರಿ ಅಪಾರ್ಟ್‌ಮೆಂಟ್‌ಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ವಸತಿ, ಬ್ಯಾಂಕ್, ಕಾರ್ ಡೀಲರ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು ಎಕ್ಸ್ ಪೋದಲ್ಲಿ ಭಾಗವಹಿಸಲಿವೆ ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕ್ರೆಡೈ ಸಂಸ್ಥೆಯ ಅಧ್ಯಕ್ಷ ವಿನೋದ್ ಪಿಂಟೋ ರವರು ಮಾತಾನಾಡಿಇತ್ತೀಚೆಗೆ, ಬಿಲ್ಡರ್ ಸಂಸ್ಥೆಯೊಂದರ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಂಬಂಧಿಸಿದ ಪ್ರಕರಣದಲ್ಲಿ ಗ್ರಾಹಕರ ವೇದಿಕೆಯು ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದರು.
ಮಂಗಳೂರಿನ ಕಟ್ಟಡ ನಿಯಮಾವಳಿ ಪ್ರಕಾರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದರೂ, ತನಗೆ ನಿಗದಿತ ಕಾರ್ ಪಾರ್ಕಿಂಗ್ ಸ್ಲಾಟ್ ನಿಗದಿಪಡಿಸಿಲ್ಲ ಎಂದು ದೂರುದಾರರು ಆರಂಭಿಕ ದೂರು ನೀಡಿ ಪ್ರಸಕ್ತ ನೀಡಿರುವ ಆವರಣದೊಳಗೆ ಮುಚ್ಚಿದ ಪಾರ್ಕಿಂಗ್ (ತಗಡು ಮಾಡು) ಮಾದರಿಯ ಪಾರ್ಕಿಂಗ್ ಬೇಡ, ತನಗೆ ಕಾಂಕ್ರೀಟ್ ಕಟ್ಟಡದ ಕೆಳಗೆಯೆ ಪಾರ್ಕಿಂಗ್ ಸ್ಲಾಟ್ ಬೇಕು ಎಂದು ಹೇಳಿದ್ದರು. ಆದರೆ ಸದ್ರಿ ಕಟ್ಟಡವು ಈಗಾಗಲೇ.ಮಾರಾಟ ವಾಗಿದ್ದು,ಪ್ರಸಕ್ತ ಸನ್ನಿವೇಶದಲ್ಲಿ ಬದಲಾವಣೆ ಆಸಾಧ್ಯವಾಗಿತ್ತು. ಸದ್ರಿ ಸಮಸ್ಯೆಯ ಬಗ್ಗೆ ದೂರುದಾರ ವ್ಯಕ್ತಿಯ ಬಳಿ ಸಾಕಷ್ಟು ಬಾರಿ ಸಂಧಾನ ನಡೆಸಿದರು ಪರಿಹಾರ ಸಾಧ್ಯವಾಗಿರಲಿಲ್ಲ. ಈ ನಡುವೆ ಜಿಲ್ಲಾ ಗ್ರಾಹಕ ವೇದಿಕೆ ದೂರುದಾರರ ಪರವಾಗಿ ತೀರ್ಪು ನೀಡಿದೆ ಎಂದರು.
ಮುಂದೆ ರಾಜ್ಯ ವೇದಿಕೆಯಲ್ಲಿ ಈ ಬಗ್ಗೆ ಮನವಿ ಮಾಡಲಾಗಿದೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಕಾರ್ಯದರ್ಶಿ ಗುರು ಎಂ ರಾವ್, ಉಪಾಧ್ಯಕ್ಷ ಪ್ರಶಾಂತ್ ಸನಿಲ್, ಜತೆ ಕಾರ್ಯದರ್ಶಿ ಲಕ್ಷ್ಮೀನಾ ರಾಯಣ ಭಂಡಾರಿ, ಕೋಶಾಧಿಕಾರಿ ಕರುಣಾಕರನ್ , ಪ್ರಮುಖರಾದ ರೋಹನ್ ಮೊಂತೇರೊ, ನವೀನ್ ಕಾರ್ಡೋಜ, ಧೀರಜ್ ಅಮೀನ್, ಆವೊಲಾನ್ ಪತ್ರಾವೊ, ವಿಲಿಯಂ ಡಿಸೋಜ, ರವೀಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.